ಯಾದಗಿರಿ | ಯಕ್ಷಿಂತಿ ಗ್ರಾಮದಲ್ಲಿ ಡಾ.ಅಂಬೇಡ್ಕರ್ ಜಯಂತಿ ಆಚರಣೆ

ವಡಗೇರಾ : ದೇಶದ ಎಲ್ಲ ನಾಗರಿಕರಿಗೆ ಸ್ವಾತಂತ್ರ್ಯ, ಸಮಾನತೆಯಿಂದ ಬದುಕಲು ಸಂವಿಧಾನ ಮೂಲಕ ಸುಭದ್ರವಾದ ಬುನಾದಿ ಹಾಕಿಕೊಟ್ಟ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನಾವೆಲ್ಲರೂ ಸ್ಮರಿಸಬೇಕು ಎಂದು ರಾಜ್ಯ ರೈತ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ನಾಗರತ್ನ ವಿ.ಪಾಟೀಲ್ಅ ಭಿಪ್ರಾಯ ಪಟ್ಟರು.
ವಡಿಗೇರಾ ತಾಲೂಕಿನ ಯಕ್ಷಿಂತಿ ಗ್ರಾಮದಲ್ಲಿ ಡಾ.ಅಂಬೇಡ್ಕರ್ ಅವರ ಜಯಂತೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬುದ್ಧ ಬಂದು ಬೀಜ ನೆಟ್ಟು ಹೋದರು, ಬಸವಣ್ಣ ಬಂದು ಮರವಾಗಿ ಬೆಳೆದು ಹೋದರು, ಡಾ.ಅಂಬೇಡ್ಕರ್ ಅವರು ಫಲವಾಗಿ ಹಣ್ಣುಗಳು ಕೊಟ್ಟಿದ್ದಾರೆ. ನಾವೆಲ್ಲ ಹಣ್ಣು ಪಡೆದುಕೊಂಡು ಜೀವಿಸಬೇಕಾದರೆ ನಾವೆಲ್ಲರೂ ಅಂಬೇಡ್ಕರ್ ಹೇಳಿದಂತೆ ಶಿಕ್ಷಣವಂತರಾಗಬೇಕು. ಸಂಘಟಿತರಾಗಿ ಹೋರಾಡಬೇಕು. ನಮ್ಮ ಹಕ್ಕು ನಮ್ಮ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.
ಶರಣಗೌಡ ಚಿಕ್ಕಮೇಟಿ, ಮಲ್ಲಿಕಾರ್ಜುನ ಮಸರಕಲ್, ದೇವರಾಜ್ ದೊಡ್ಮನಿ, ಕತಲ್ ಸಾಬ್ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಸ್ವಾಮಿ ಕಾರ್ಯಕ್ರಮದ ಜ್ಯೋತಿ ಬೆಳಗಿಸಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ರೈತ ಸಂಘ ಕ ಕ ವಿಭಾಗದ ಉಪಾಧ್ಯಕ್ಷ ರಾಕೇಶ್ ಗೌಡ ಮಲ್ಲಿಕಾರ್ಜುನ ಸಾಹುಕಾರ, ಚಂದ್ರಶೇಖರ ದೇಸಾಯಿ, ಡಾ.ಶರಿಫ್ ಬೆಳಗೇರಿ, sdmc ಅಧ್ಯಕ್ಷ ಹಣಮಂತ ದೊಡ್ಮನಿ, ಮಲ್ಲಣ್ಣ ಕಾವಲಿ, ನಿಂಗಣ್ಣ ದೊರೆ, ಯಂಕಣ್ಣ ಬಂಗಾರಿ, ದೇವಣ್ಣ ಪೂಜಾರಿ, ಶಿವಣ್ಣ ಬುಡಸಕ್ರಿ, ಮುದುಕಪ್ಪ ಗೌಡೂರ, ಹೈಯ್ಯಾಳಪ್ಪ ಸೋತೆನೋರ, ಅಮಾತೆಪ್ಪ, ಹೊನ್ನಪ್ಪ ಭಂಡಾರಿ, ದೇವಪ್ಪ ಅನಸೂರ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು. ನಿಂಗಣ್ಣ ಕರಡಿ ನಿರೂಪಣೆ ಮಾಡಿದರು.