ಯಾದಗಿರಿ | ಉಚಿತ ಆರೋಗ್ಯ ಶಿಬಿರ

ಯಾದಗಿರಿ: ಮನುಷ್ಯನಿಗೆ ಹಣ ಆಸ್ತಿಗಳಿಗಿಂತ ಮುಖ್ಯವಾಗಿ ಆರೋಗ್ಯದ ಕಡೆ ಗಮನಿಸಬೇಕು ಎಂದು ಮೋಟ್ನಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಂದ್ರ ಕುಮಾರ ಹೇಳಿದರು.
ಮೋಟ್ನಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗ್ರಾಮ ಪಂಚಾಯತ್ ಮೋಟ್ನಳ್ಳಿ, ಆಯುರ ಆರೋಗ್ಯ ಮತ್ತು ಸ್ಪರ್ಶ ಚಾರಿಟೇಬಲ್ ಟ್ರಸ್ಟ್ ಮೋಟ್ನಳ್ಳಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಸಂಧರ್ಭದಲ್ಲಿ ಡಾ.ಲಿಖಿತ್ ಡಿ ರಾಜು, ಎಸ್ ಡಿ ಎಮ್ ಸಿ ಅಧ್ಯಕ್ಷ ಸಾಬಣ್ಣ, ಗ್ರಾಮ ಪಂಚಾಯತ್ ಸದಸ್ಯರಾದ ವೆಂಕಟರಮಣ ಗಟ್ಲಾ, ಸೀಮೆನ್, ರೆಡ್ಡಿ, ರಾಜಕುಮಾರ, ಶರಣಪ್ಪ ಬೈರಂಕೊಂಡ, ಶರಣಗೌಡ, ವಸಂತ, ಚನ್ನಬಸಪ್ಪ, ಶೋಭಾ, ಉಮಾ, ಅಕ್ಷತಾ, ಅಖಿಲೇಶ್, ಶಿವಕುಮಾರ, ಮಹೇಶ್ವರಿ, ಮೌನೇಶ ಪಂಚಾಳ, ಬನಶಂಕರ, ಶಿವಶಂಕರ್, ಶರಣಕುಮಾರ, ಬಸವರಾಜಪ್ಪ ಅರಳಿ ಹಾಗೂ ಮೋಟ್ನಳ್ಳಿ ಗ್ರಾಮಸ್ಥರು ಭಾಗವಹಿಸಿದ್ದರು.
Next Story