ಯಾದಗಿರಿ | ಶಾಂತಿಯಿಂದ ಜೀವನ ನಡೆಸುವ ಹಾಲುಮತ ಸಮುದಾಯ : ಡಾ.ಭೀಮಣ್ಣ ಮೇಟಿ

ಯಾದಗಿರಿ : ದೇಶದಲ್ಲಿ ಹಾಲು ಮತ ಸಮುದಾಯ ಬಾಂಧವರು ಸತ್ಯ ಮತ್ತು ಶಾಂತಿಯಿಂದ ಜೀವನ ನಡೆಸುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ.ಭೀಮಣ್ಣ ಮೇಟಿ ಹೇಳಿದರು.
ನಗರದ ಕರ್ನಾಟಕ ಪ್ರದೇಶ ಕುರುಬರ ಸಂಘದ ಕಚೇರಿಯಲ್ಲಿ ರವಿವಾರ ನಡೆದ ಕುರುಬ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದಲ್ಲಿ ಡೊಳ್ಳು, ಕಂಬಳಿ, ಭಂಡಾರ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಿದ್ದಾರೆ. ಸತ್ಯವನ್ನು ತಮ್ಮ ಜೀವನದಲ್ಲಿ ಮೈಗೂಡಿಸಿಕೊಂಡಿದ್ದಾರೆ. ಇದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅಗತ್ಯವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ಮಲ್ಲಣ್ಣ ಐಕೂರು, ಮಲ್ಲಯ್ಯ ಕಸಬಿ, ಭೀಮರಾಯ ಜಂಗಳಿ, ಭೀಮಣ್ಣ ಕೆಂಗೂರಿ, ನಾಗಣ್ಣಗೌಡ ಬಿದರಾಣಿ, ಸಾಬರಡ್ಡಿ ಬಳಿಚಕ್ರ, ಮಲ್ಲು ಪ್ರಜಾರಿ, ಯಂಕೂಬ ಇದ್ದರು.
Next Story