ಯಾದಗಿರಿ | ಮಹಾತ್ಮ ಜ್ಯೋತಿಬಾ ಫುಲೆ ಜಯಂತಿ ಆಚರಣೆ

ಸುರಪುರ : ದೇಶದಲ್ಲಿ ಮಹಿಳಾ ಶಿಕ್ಷಣಕ್ಕೆ ಮೊದಲು ಒತ್ತು ನೀಡಿದ ಮಹಾನ್ ಪುರುಷರು ಎಂದರೆ ಜ್ಯೋತಿಬಾ ಫುಲೆ ದಂಪತಿಗಳಾಗಿದ್ದಾರೆ ಎಂದು ಮುಖಂಡರು ತಿಳಿಸಿದರು.
ನಗರದ ಮಹಾತ್ಮ ಗೌತಮ್ ಬುದ್ಧರ ವೃತ್ತದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣ ದಿಂದ ಹಮ್ಮಿಕೊಂಡಿದ್ದ ಮಹಾತ್ಮ ಜ್ಯೋತಿಬಾ ಫುಲೆ ಜಯಂತಿ ಕಾರ್ಯಕ್ರಮ ನಡೆಯಿತು.
ಸಂಘಟನೆಯ ರಾ.ಸಂ.ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ನಿವೃತ್ತ ಪ್ರೋ. ಮಾನು ಗುರಿಕಾರ,ಶಿಕ್ಷಕ ಸಿದ್ದು ಬೊಮ್ಮನಹಳ್ಳಿ ಮಾತನಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ಜ್ಯೋತಿಬಾ ಫುಲೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಮೂರ್ತಿ ಬೊಮ್ಮನಹಳ್ಳಿ, ರಾಮಣ್ಣ ಶೆಳ್ಳಗಿ, ಮಹೇಶ ಯಾದಗಿರಿ, ಬಸವರಾಜ ಬೊಮ್ಮನಹಳ್ಳಿ,ಬಸವರಾಜ ದೊಡ್ಮನಿ, ರವಿ ಬೊಮ್ಮನಹಳ್ಳಿ, ಶಾಂತಪ್ಪ ಮಂಗಿಹಾಳ, ಹುಲಿಯಪ್ಪ ಶೆಳ್ಳಗಿ,ಹುಲಗಪ್ಪ ಬೈಲಕುಂಟಿ,ಭೀಮರಾಯ ಪೂಜಾರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Next Story