ಬೆಲೆ
ಚಿನ್ನದ ಅಂಗಡಿಯಲ್ಲಿ ಒಂದು ಬೆಲೆ ಬಾಳುವ ವಜ್ರದ ಸರ. ಅದರ ಪಕ್ಕದಲ್ಲೇ ಒಂದು ಕನ್ನಡಿ. ಜೊತೆಯಾಗಿ ಸಂಸಾರ ಹೂಡುತ್ತಿತ್ತು.
ಒಂದು ದಿನ ವಜ್ರದ ಸರ ಅಸಹನೆಯಿಂದ ನುಡಿಯಿತು... ‘‘ಲಕ್ಷಾಂತರ ಬೆಲೆ ಬಾಳುವ ನನ್ನ ಜೊತೆಗೆ ಈ ಗಾಜಿನ ಕನ್ನಡಿಯನ್ನು ಯಾಕೆ ನಿಲ್ಲಿಸಿದ್ದಾರೆ? ನನ್ನ ಬೆಲೆಯೇನು? ಈ ಕನ್ನಡಿಯ ಬೆಲೆಯೇನು?’’
ಅಷ್ಟರಲ್ಲಿ ಶ್ರೀಮಂತ ಮಹಿಳೆಯೊಬ್ಬಳು ಅಲ್ಲಿಗೆ ಬಂದಳು. ಆ ವಜ್ರದ ಆಭರಣವನ್ನು ಎತ್ತಿಕೊಂಡಳು. ಈಗ ಆಭರಣಕ್ಕೆ ಸಂಭ್ರಮ. ಈ ಗಾಜಿನ ಕನ್ನಡಿಯ ಜೊತೆಗಿನ ಸಹವಾಸ ಇನ್ನಾದರೂ ಮುಗಿಯುತ್ತದೆ. ಆಕೆಯ ಕೊರಳು ಸೇರಿಕೊಂಡು ಊರೂರು ಸುತ್ತುತ್ತೇನೆ....
ಮಹಿಳೆ ಆಭರಣವನ್ನು ಕೊರಳಿಗೆ ಧರಿಸಿಕೊಂಡಳು ಮತ್ತು ನೇರವಾಗಿ ಕನ್ನಡಿಯ ಮುಂದೆ ನಿಂತಳು. ಕನ್ನಡಿಯಲ್ಲಿ ಆಭರಣ ಪ್ರತಿಫಲಿಸಿತು. ಯಾಕೋ ಏನೋ ಸರಿ ಕಾಣಲಿಲ್ಲ. ಆಭರಣವನ್ನು ತಿರಸ್ಕರಿಸಿ, ಇದ್ದ ಸ್ಥಳದಲ್ಲೇ ಇಟ್ಟಳು.
ಕನ್ನಡಿ ಈಗ ಆಭರಣಕ್ಕೆ ಹೇಳಿತು ‘‘ನೀನೆಷ್ಟೇ ಬೆಲೆ ಬಾಳಬಹುದು. ಆದರೆ ಅಂತಿಮವಾಗಿ ಅವರು ನಿನ್ನನ್ನು ಧರಿಸಿ ನನ್ನೆದುರು ಬಂದು ನಿಲ್ಲಲೇ ಬೇಕು. ನಾನು ತಿರಸ್ಕರಿಸಿದರೆ ನೀನು ಮತ್ತೆ ನಿನ್ನ ಸ್ಥಾನಕ್ಕೆ ಸೇರಲೇ ಬೇಕು....’
ಮಗು