ಝೀನತ್ ಪ್ಲೈವುಡ್ ಮಾಲಕ ಹಾಜಿ ಅಬ್ದುಲ್ ಖಾದರ್ ನಿಧನ
ಮಂಗಳೂರು: ತಲಪಾಡಿ ಕೆ.ಸಿ.ರೋಡ್ ನಿವಾಸಿ, ಝೀನತ್ ಪ್ಲೈವುಡ್ ಹಾಗೂ ಝೀನತ್ ಬೀಡಿ ಮಾಲಕ ಹಾಜಿ ಎಸ್. ಅಬ್ದುಲ್ ಖಾದರ್ (ಝೀನತ್ ಹಾಜಿ) ಶುಕ್ರವಾರ ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 78 ವರ್ಷ ಪ್ರಾಯವಾಗಿತ್ತು.
ಶಿಕ್ಷಣ ಪ್ರೇಮಿ ಹಾಗೂ ಕೊಡುಗೈ ದಾನಿಯಾಗಿದ್ದ ಅಬ್ದುಲ್ ಖಾದರ್ ಹಾಜಿ ಕೆ.ಸಿ. ನಗರದಲ್ಲಿ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದರು. ಝೀನತ್ ಎಜುಕೇಶನಲ್ ಟ್ರಸ್ಟ್ ಇದರ ಅಧ್ಯಕ್ಷರಾಗಿದ್ದ ಇವರು ಕೆ.ಸಿ. ನಗರದ ಅಬ್ರಾರ್ ಸಲಫಿ ಮಸ್ಜಿದ್ ಮತ್ತು ಬಿಲಾಲ್ ಜುಮಾ ಮಸ್ಜಿದ್ ಇದರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ, ಐವರು ಪುತ್ರರು, ಆರು ಮಂದಿ ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ದಫನ ಕಾರ್ಯವು ಇಂದು(ಜ.3) ಜುಮಾ ನಮಾಝ್ ಗೆ ಮುಂಚೆ ತಲಪಾಡಿ ಕೆ.ಸಿ.ನಗರದಲ್ಲಿರುವ ಝೀನತ್ ಎಜುಕೇಶನಲ್ ಟ್ರಸ್ಟ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story