ಮಾದಕ ವಸ್ತು ಸೇವನೆ: 8 ಮಂದಿ ಆರೋಪಿಗಳ ಬಂಧನ
Update: 2024-12-11 16:03 GMT
ಮಂಗಳೂರು: ಮಂಗಳೂರು ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕ ಪದಾರ್ಥ ಸೇವಿಸಿದ ಆರೋಪದಲ್ಲಿ 8 ಮಂದಿಯನ್ನು ಬಂಧಿಸಿದ್ದಾರೆ.
ಕೇರಳ ಕಾಞಂಗಾಡ್‌ನ ನಮೃತ್(20), ಕೊಲ್ಲಂನ ಜೋನೆ ಅಲೆಕ್ಸ್ ಜಾರ್ಜ್(19), ಬಿಜೈ ಕಾಪಿಕಾಡ್‌ನ ಶಮಿತ್ ಕುಮಾರ್(21), ಮಂಗಳೂರು ಕಣ್ಣೂರಿನ ಸಿದ್ದೀಕ್(42), ಕೋಲಾಡಿಯ ಅಭಿನ್‌ಕೆ.ಬಿ(19), ಪುರಪಿಲ್ಲಿಯ ನವನೀತ್ ಪಿ.ಎಂ(19), ಪಣಂಬೂರಿನ ತಾಲೀಮ(26) ಮತ್ತು ಕಸ್ಬಾ ಬೆಂಗ್ರೆಯ ಸಾದಾತ್(27) ಬಂಧಿತ ಆರೋಪಿಗಳು. ಇವರ ವಿರುದ್ಧ ಎನ್‌ಡಿಪಿಎಸ್ ಆ್ಯಕ್ಟ್ ಕಲಂ 27(ಬಿ) ನಂತೆ ಪ್ರಕರಣ ದಾಖಲಾಗಿದೆ.