ʼಮೀಫ್ - ಸುಲ್ತಾನ್ ಕಪ್ʼ ಜಿಲ್ಲಾ ಮಟ್ಟದ ಫುಟ್ಬಾಲ್ ಟೂರ್ನಿ: ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆ ಕಂದಕ್ ಚಾಂಪಿಯನ್

Update: 2024-12-11 13:48 GMT

ಮಂಗಳೂರು: ದ.ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್ ) ವತಿಯಿಂದ ಯೆನೆಪೋಯ ಆಯುಷ್ ಫುಟ್ಬಾಲ್ ಮೈದಾನದಲ್ಲಿ ಮಂಗಳವಾರ ನಡೆದ ಉಭಯ ಜಿಲ್ಲೆಗಳ ಮೀಫ್- ಸುಲ್ತಾನ್ ಕಪ್ - ಫುಟ್ಬಾಲ್ ಟೂರ್ನಮೆಂಟ್‌ನಲ್ಲಿ ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆ ಕಂದಕ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಕುನಿಲ್ ಆಂಗ್ಲ ಮಾಧ್ಯಮ ಶಾಲೆ ನಾಟೆಕಲ್ ದ್ವಿತೀಯ ಪಡೆಯಿತು.

ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷ ಜಿ. ಮುಹಮ್ಮದ್ ಹನೀಫ್ ಟೂರ್ನಮೆಂಟ್‌ನ ಉದ್ಘಾಟನೆ ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ವಹಿಸಿ, ಮೀಫ್ ವತಿಯಿಂದ ಪ್ರತಿಭಾವಂತ ಹಾಗೂ ಬಡ ವಿದ್ಯಾರ್ಥಿಗಳಿಗೆ ಸಿಗುವ ಸೌಲಭ್ಯಗಳನ್ನು ವಿವರಿಸಿದರು.

ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮೀಫ್ ಪ್ರ. ಕಾರ್ಯದರ್ಶಿ ರಿಯಾಝ್ ಅಹ್ಮದ್ ಕಣ್ಣೂರು ಸ್ವಾಗತಿಸಿ ದರು. ಮುಖ್ಯ ಅತಿಥಿಗಳಾಗಿ ಪಿ.ಎ ಫಸ್ಟ್ ಗ್ರೇಡ್ ಕಾಲೇಜು ಇದರ ಪ್ರಾಂಶುಪಾಲ ಡಾ. ಸರ್ಫರಾಜ್ ಜೆ. ಹಾಸಿಮ್ ಮತ್ತು ದ.ಕ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್‌ನ ಅಧ್ಯಕ್ಷ ಡಿ.ಎಮ್ ಅಸ್ಲಮ್ ಭಾಗವಹಿಸಿ ವಿಜೇತರನ್ನು ಅಭಿನಂದಿಸಿದರು.

ವೇದಿಕೆಯಲ್ಲಿ ಕಣ್ಣೂರು ವಿದ್ಯಾ ಸಂಸ್ಥೆಯ ಅಬ್ದುಲ್ ಮಜೀದ್ ಸಿತಾರ್, ಕುನಿಲ್ ವಿದ್ಯಾ ಸಂಸ್ಥೆಯ ಆದಿಲ್, ಸುಳ್ಯ ತಾಲೂಕು ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಶರೀಫ್ ಕಂಟಿ, ಮೀಫ್ ಪೂರ್ವ ವಲಯ ಉಪಾಧ್ಯಕ್ಷ ಕೆ. ಎಂ. ಮುಸ್ತಫ ಸುಳ್ಯ, ಕೋಶಾಧಿಕಾರಿ ನಿಸಾರ್ ಫಕೀರ್ ಮುಹಮ್ಮದ್, ಆಡಳಿತ ಕಾರ್ಯದರ್ಶಿ ಅನ್ವರ್ ಹುಸೈನ್, ಕನ್ವಿನರ್ ಮುಹಮ್ಮದ್ ಶಹಾಮ್, ಸದಸ್ಯರಾದ ಪರ್ವೆಝ್ ಅಲಿ, ರಝಾಕ್ ಹಜಾಜ್ ಉಪಸ್ಥಿತರಿದ್ದರು.

ಕಾರ್ಯಕ್ರಮ ಕಾರ್ಯದರ್ಶಿ ಮುಹಮ್ಮದ್ ಶಾರಿಕ್ ನಿರೂಪಣೆ ಮಾಡಿದರು.

ವಿಜೇತರಿಗೆ ಚಾಂಪಿಯನ್ ಶಿಪ್ ಟ್ರೋಫಿ, ಪದಕ, ಪ್ರಶಸ್ತಿ ಪತ್ರ ಹಾಗೂ ವೈಯುಕ್ತಿಕ ಪ್ರಶಸ್ತಿಗಳನ್ನು ವಿತರಿಸಲಾಯಿತು. ಉಭಯ ಜಿಲ್ಲೆಗಳ ಒಟ್ಟು 19 ವಿದ್ಯಾ ಸಂಸ್ಥೆಗಳ 350 ಆಟಗಾರರು ಭಾಗವಹಿಸಿದ್ದರು. ಪಂದ್ಯಾಕೂಟದ ಪ್ರಾಯೋಜಕತ್ವ ವನ್ನು ಸುಲ್ತಾನ್ ಡೈಮೆಂಡ್ಸ್ ಗೋಲ್ಡ್ ನಿರ್ವಹಿಸಿತ್ತು.

ಫಲಿತಾಂಶ: ಚಾಂಪಿಯನ್ಸ್: ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆ ಕಂದಕ್

ರನ್ನರ್ಸ್: ಕುನಿಲ್ ಆಂಗ್ಲ ಮಾಧ್ಯಮ ಶಾಲೆ ನಾಟೆಕಲ್

ಬೆಸ್ಟ್ ಗೋಲ್ ಕೀಪರ್: ಸುಹೈಲ್ - ಕುನಿಲ್ ಆಂಗ್ಲ ಮಾಧ್ಯಮ ಶಾಲೆ ನಾಟೆಕಲ್, ಬೆಸ್ಟ್ ಸ್ಟ್ರೈಕರ್ : ಫಾಹಿಮ್ - ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆ ಕಂದಕ್, ಬೆಸ್ಟ್ ಡಿಫೆಂಡರ್: ಇಶಾನ್ - ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆ ಕಂದಕ್






Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News