ಮಹಾಯುತಿಯ ಗೆಲುವು ವಿಕಸಿತ ಭಾರತದ ಸಂಕಲ್ಪ-ಪರಿಕಲ್ಪನೆಯನ್ನು ಗಟ್ಟಿಗೊಳಿಸಿದೆ: ಸಂಸದ ಬ್ರಿಜೇಶ್ ಚೌಟ

Update: 2024-11-24 17:21 GMT

ಮಂಗಳೂರು: ಮಹಾರಾಷ್ಟ್ರದಲ್ಲಿ ಮಹಾಯುತಿ ಗೆಲ್ಲುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಸಂಕಲ್ಪ-ಪರಿಕಲ್ಪನೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ ಎಂದು ಸಂಸದ ಬ್ರಿಜೇಶ್ ಚೌಟ ಬಣ್ಣಿಸಿದ್ದಾರೆ.

ಸಮಾಜವನ್ನು ಒಡೆದು ಆಳುವ ನೀತಿಯನ್ನು ’ಮಹಾ’ ಜನತೆ ಸಾರಸಗಟಾಗಿ ತಿರಸ್ಕರಿಸಿದ್ದು, ಈ ಚುನಾವಣಾ ಫಲಿತಾಂಶವು ಪ್ರಧಾನ ಮಂತ್ರಿಯವರ ‘ಏಕ್ ಹೈ ತೋ ಸೇಫ್ ಹೈ’ ಎಂಬ ಮೂಲ ಮಂತ್ರದಂತೆ ಏಕತ್ವದ ಸಂದೇಶ ವನ್ನು ಸಾರಿದೆ ಮತ್ತು ಜಾತಿಗಳ ಮದ್ಯೆ ಸಮಾಜವನ್ನು ಒಡೆಯುವ ಕಾಂಗ್ರೆಸ್ ನ ಪ್ರಯತ್ನವನ್ನು ಸೋಲಿಸಿದೆ ಎಂದು ಚೌಟ ಅಭಿಪ್ರಾಯಪಟ್ಟಿದ್ದಾರೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿ ಕೂಟದ ಅಭೂತಪೂರ್ವ ಗೆಲುವು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯ ಕಾರ್ಯ-ಯೋಜನೆಗಳ ಮೇಲೆ ಜನರ ನಂಬಿಕೆ ಮತ್ತು ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಹೀಗಿರುವಾಗ, ಈ ಐತಿಹಾಸಿಕ ಗೆಲುವು ವಿಕಸಿತ ಭಾರತದ ಗೆಲುವು ಮತ್ತು ಹಿಂದುತ್ವದ ವಿಜಯ ಮಹಾರಾಷ್ಟ್ರದ ಜನರು ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿಯನ್ನು ಸೋಲಿಸುವ ಮೂಲಕ ತುಷ್ಟೀಕರಣ ರಾಜಕಾರಣ ಹಾಗೂ ಕುಟುಂಬ ರಾಜಕಾರಣಕ್ಕೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಹೇಳಿದ್ದಾರೆ.

ಚುನಾವಣೆ ಸಂದರ್ಭ ಪಕ್ಷ ನೀಡಿದ್ದ ಜವಾಬ್ದಾರಿಯಂತೆ ಪುಣೆಯಲ್ಲಿ ಪ್ರಚಾರ ಮಾಡುವ ಅವಕಾಶ ನನಗೂ ಲಭಿಸಿತ್ತು. ಮೋದಿಯನ್ನು ಬೆಂಬಲಿಸಿದ ಮುಂಬೈ, ಪುಣೆ ಸೇರಿದಂತೆ ಮಹಾರಾಷ್ಟ್ರದ ಇತರ ಭಾಗಗಳ ಎಲ್ಲಾ ತುಳುವ ಕನ್ನಡಿಗರಿಗೂ ನಾನು ಈ ಸಂದರ್ಭದಲ್ಲಿ ಧನ್ಯವಾದ ಹೇಳುವುದಾಗಿ ಚೌಟ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News