ನಿಟ್ಟೆ: ಹೃದಯ ಕಾಯಿಲೆಗೆ ಅಪರೂಪದ ಶಸ್ತ್ರಚಿಕಿತ್ಸೆ
ಕೊಣಾಜೆ: ಹೃದಯ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ 35 ವರ್ಷದ ಮಹಿಳೆಯೊಬ್ಬರಿಗೆ ಕೆ.ಎಸ್. ಹೆಗ್ಡೆ ವೈದ್ಯಕೀಯ ಅಕಾಡೆಮಿಯ ತಜ್ಞರ ತಂಡವು ವಿಶಿಷ್ಟ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಹೃದಯಕ್ಕೆ ಸಂಬಂಧಿಸಿದ ದೋಷದಿಂದಾಗಿ ಶುದ್ಧ ಮತ್ತು ಅಶುದ್ಧ ರಕ್ತವು ಮಿಶ್ರಣವಾಗುತ್ತಿದ್ದ ಸಮಸ್ಯೆಗೆ ಸಂಬಂಧಿಸಿದಂತೆ ಪ್ರಥಮ ಬಾರಿಗೆ ನಡೆದ ಹೃದಯ ಶಸ್ತ್ರಚಿಕಿತ್ಸೆಯಾಗಿದೆ.
ವಿಶೇಷ ಆಧುನಿಕ ಉಪಕರಣಗಳನ್ನು ಬಳಸಿಕೊಂಡು ಡಾ. ಎ. ಜಿ. ಜಯಕೃಷ್ಣನ್, ಡಾ. ಎಂ. ಗೋಪಾಲಕೃಷ್ಣನ್, ಡಾ. ಮಂಜುನಾಥ ಕಾಮತ್, ಡಾ. ನರೇಶ್ ಹೆಗ್ಡೆ, ಡಾ. ಅನುಪ್ ಶ್ರೀನಿವಾಸನ್, ಪರ್ಫ್ಯೂಷನಿಸ್ಟ್‌ಗಳು ಹಾಗೂ ನರ್ಸ್‌ಗಳ ತಂಡ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಹಕರಿಸಿದ್ದಾರೆ. ರೋಗಿ ಶಸ್ತ್ರಚಿಕಿತ್ಸೆಯ ನಂತರ ಉತ್ತಮವಾಗಿ ಚೇತರಿಸಿಕೊಂಡಿದ್ದು ಇದೀಗ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ರೋಗಿಗೆ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ನಿರ್ವಹಿಸಲಾಗಿದೆ ಎಂದು ಆಸ್ಪತ್ರೆಯ ಪ್ರಕಟನೆ ತಿಳಿಸಿದೆ.