ಉಳ್ಳಾಲ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕುಂಞಿಮೋನು ನಿಧನ

ಉಳ್ಳಾಲ: ಪಿಲಾರ್ ನಿವಾಸಿ ಕುಂಞಮೋನಾಕ (ಕಾರ್ ಕುಂಞಿಮೋನಾಕ) ಅಲ್ಪಕಾಲದ ಅನಾರೋಗ್ಯ ದಿಂದ ಸೋಮವಾರ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 78 ವರ್ಷ ಪ್ರಾಯವಾಗಿತ್ತು.
ಕಾರ್ ಚಾಲಕ, ಮಾಲಕರಾಗಿ ಹಲವು ವರ್ಷಗಳ ಕಾಲ ದುಡಿದ ಅವರು ರಾಜಕೀಯದಲ್ಲಿ ಪ್ರಬಲವಾಗಿ ಗುರುತಿಸಿಕೊಂಡಿದ್ದರು.
ಸ್ಪೋರ್ಟ್ಸ್ ಕ್ಲಬ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಅವರು ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದುಕೊಂಡು ಎರಡು ಬಾರಿ ನಗರ ಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಒಂದು ಅವಧಿಯಲ್ಲಿ ನಗರಸಭೆ ಅಧ್ಯಕ್ಷರಾಗಿದ್ದ ಅವರು ಪ್ರಸಕ್ತ ನಗರಸಭೆ ನಾಮನಿರ್ದೇಶಿತ ಸದಸ್ಯರಾಗಿದ್ದರು.
ಹಲವರ ಕಷ್ಟ ಸುಖ ಗಳಿಗೆ ಸ್ಪಂದಿಸಿ, ಸಮಾಜ ಸೇವೆ ಯಲ್ಲಿ ಗುರುತಿಸಿಕೊಂಡಿದ್ದ ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡಿದ್ದರು.
ಮೃತರು ಮೂರು ಗಂಡು, ಮೂರು ಹೆಣ್ಣು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಅವರ ನಿಧನಕ್ಕೆ ಡಿಸಿಸಿ ಉಪಾಧ್ಯಕ್ಷ ಟಿ.ಎಸ್ ಅಬ್ದುಲ್ಲಾ, ಕಾಂಗ್ರೆಸ್ ಮುಖಂಡ ಫಾರೂಕ್ ಉಳ್ಳಾಲ್ , ನಾಸೀರ್ ಅಹ್ಮದ್ ಸಾಮಣಿಗೆ ಸಂತಾಪ ಸೂಚಿಸಿದ್ದಾರೆ.