ಉಳ್ಳಾಲ: ಹಳೆಕೋಟೆ ಶಾಲೆಯಲ್ಲಿ ಗಣರಾಜ್ಯೋತ್ಸವ
Update: 2025-01-26 15:00 IST

ಉಳ್ಳಾಲ: ಹಳೆಕೋಟೆ ಸಯ್ಯದ್ ಮದನಿ ವಿದ್ಯಾ ಸಂಸ್ಥೆಯಲ್ಲಿ 76ನೇ ಪ್ರಜಾಪ್ರಭುತ್ವ ದಿನಾಚರಣೆಯನ್ನು ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ನ ಅದೀನ ಸಂಸ್ಥೆಗಳಾದ ಸೈಯದ್ ಮದಿನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಸೈಯದ್ ಮಾದರಿ ಪ್ರೌಢಶಾಲೆ ಹಳೆಕೋಟೆ ಯಲ್ಲಿ ಆಚರಿಸಲಾಯಿತು.ಮಸ್ಜಿದ್ ಅಲ್ ಕರೀಂ ಇದರ ಉಪಾಧ್ಯಕ್ಷಜೈನುದ್ದೀನ್ ಹಾಜಿ ಯವರು ಧ್ವಜಾರೋಹಣ ಗೈದರು.
ಸಂವಿಧಾನದ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ ವೇಷಧಾರಿಗಳಾಗಿ ಶಾಲಾ ವಿದ್ಯಾರ್ಥಿಗಳಾದ ಶಾ ಜೀನ್ ಮತ್ತು ನಜಾದ್ ರವರು ಮಿಂಚಿದರು. ಈ ಸಂದರ್ಭದಲ್ಲಿ ಸದಸ್ಯರಾದ ಫಾರೂಕ್ ಯು ಎಚ್, ಹಳೆಕೋಟೆ ಮಸ್ಜಿ ದ್ ನ ಕೋಶಾಧಿಕಾರಿ ಅಶ್ರಫ್, ಶಾಲಾ ಉಪನಾಯಕಿ ಜೈನಬ ಫೈಮಾ, ಉಪಸ್ಥಿತರಿದ್ದರು. ಒಂದನೆಯ ತರಗತಿಯ ವಿದ್ಯಾರ್ಥಿಗಳು ಸಂವಿಧಾನದ ಪ್ರಸ್ತಾವನೆಯನ್ನು ವಿವರಿಸಿದರು. ಶಾಲಾ ಮುಖ್ಯೋಪಾಧ್ಯಾಯ ಕೆ ಎಂ ಕೆ ಮಂಜನಾಡಿ ಸ್ವಾಗತಿಸಿದರು