ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಕಟ್ಟಡ ಸಮುಚ್ಚಯ ಉದ್ಘಾಟನೆ
ಸುಳ್ಯ, ಜ.2: ಬನಾರಿ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ ದೇಲಂಪಾಡಿ ಆಶ್ರಯದಲ್ಲಿ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಕಟ್ಟಡ ಸಮುಚ್ಚಯದ ಉದ್ಘಾಟನೆ ಶನಿವಾರ ನಡೆಯಿತು.
ದೇಲಂಪಾಡಿಯ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರು ಸಾಂಸ್ಕೃತಿಕ ಅಧ್ಯಯನ ಕೇಂದ್ರ ಕಟ್ಟಡ ಸಮುಚ್ಚಯ ಹಾಗೂ ಬಯಲು ರಂಗಮಂದಿರವನ್ನು ಉದ್ಘಾಟಿಸಿ, ಶುಭ ಹಾರೈಸಿದರು. ಇದೇ ಸಂದರ್ಭ ಪತ್ರಕರ್ತ ಚಂದ್ರಶೇಖರ ಮಂಡೆಕೋಲು ಅವರ ‘ಯಕ್ಷಗಾನ ಗುರು ಕುಲದ ರೂವಾರಿ, ಕವಿ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟ’ ಕೃತಿಯನ್ನು ಏರ್ಯ ಲಕ್ಷ್ಮಿನಾರಾಯಣ ಆಳ್ವ ಬಿಡು ಗಡೆಗೊಳಿಸಿದರು.
ರಮಾನಂದ ಬನಾರಿ ಪ್ರಾಸ್ತಾ ವಿಕವಾಗಿ ಮಾತನಾ ಡಿದರು. ಶಾಸಕ ಕೆ.ಕುಂಞಿರಾಮನ್, ಕಾಸರಗೋಡು ಜಿಪಂ ಸ್ಥಾಯಿ ಸಮಿತಿಯ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಚಂದ್ರಶೇಖರ ಮಂಡೆಕೋಲು, ದೇಲಂಪಾಡಿ ಗ್ರಾಪಂ ಸದಸ್ಯ ಎಂ.ಐತ್ತಪ್ಪ ನಾಯ್ಕ, ಖ್ಯಾತ ಕಲಾವಿದ ಎಸ್.ಎನ್.ಪಂಜಾಜೆ ಮುಖ್ಯ ಅತಿಥಿಗಳಾಗಿದ್ದರು. ಇದೇ ವೇಳೆ ಕೇರಳ ಪಾರ್ತಿಸುಬ್ಬ ಕಲಾಕ್ಷೇತ್ರದ ಅಧ್ಯಕ್ಷ ಜಯರಾಮ ಎಡನೀರು ಶುಭಾಂಸನೆಗೈದರು. ಕಟ್ಟಡದ ವಾಸ್ತು ನಿರ್ಮಾಣದ ತಾಂತ್ರಿಕ ಸಲಹೆಗಾರ ಸುಪ್ರೀತ್ ಆಳ್ವ ಮತ್ತು ಎಂಜಿನಿಯರ್ ಕಾಡೂರು ಶಿವಕುಮಾರ್‌ರನ್ನು ಸನ್ಮಾನಿಸಲಾಯಿತು.
ಕಲಾಸಂಘದ ಅಧ್ಯಕ್ಷ ಕೀರಿ ಕ್ಕಾಡು ವನಮಾಲ ಕೇಶವ ಭಟ್ಟ ಹಾಗೂ ಸಂಚಾಲಕ ಎ.ನಾರಾಯಣ ನಾಯ್ಕಾ ಊಜಂಪಾಡಿ ವೇದಿಕೆಯಲ್ಲಿ ದ್ದರು. ಚಂದ್ರಶೇಖರ ಏತಡ್ಕ ಸ್ವಾಗತಿಸಿದರು. ನಾರಾಯಣ ದೇಲಂಪಾಡಿ ಕಾರ್ಯಕ್ರಮ ನಿರೂಪಿಸಿದರು.