ಐರಿನ್‌ರಿಗೆ ಕೊಂಕಣಿ ಸಾಹಿತ್ಯ ಪ್ರಶಸ್ತಿ
Update: 2016-02-08 19:04 GMT
ುಂಗಳೂರು, ಫೆ.8: ಕೊಂಕಣಿ ಸಾಹಿತಿ ದಿ. ವಿಕ್ಟರ್ ರೊಡ್ರಿಗಸ್ ಸ್ಮರಣಾರ್ಥ ಸಮನ್ವಯ ಸಂಸ್ಥೆಯು ನೀಡುವ ಪ್ರಸಕ್ತ ಸಾಲಿನ ಕೊಂಕಣಿ ಸಾಹಿತ್ಯ ಪ್ರಶಸ್ತಿ-2016ಗೆ ಪ್ರಖ್ಯಾತ ಕೊಂಕಣಿ ಸಾಹಿತಿ, ಐರಿನ್ ಪಿಂಟೊರವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 10,000 ರೂ., ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದ್ದು, ಫೆ.14ರಂದು ನಗರದ ಉರ್ವಸ್ಟೋರ್‌ನ ಸಮನ್ವಯ ಸಂಸ್ಥೆಯ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.