ಮಂಗಳೂರು: ಯಂಗ್ ಫೆಂಡ್ಸ್ ಉರ್ವ ತಂಡಕ್ಕೆ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಟ್ರೋಫಿ

Update: 2016-03-21 13:04 GMT

   ಮಂಗಳೂರು, ಮಾ. 21: ಜೆಪ್ಪು ಮಹಾಕಾಳಿ ಪಡ್ಪು ಮೈದಾನದಲ್ಲಿ ಮಾ.19 ಮತ್ತು 20ರಂದು ನಡೆದ ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ದಿ.ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಟ್ರೋಫಿಯನ್ನು ಯಂಗ್ ಫ್ರೆಂಡ್ಸ್ ಉರ್ವ ತಂಡ ಗೆದ್ದುಕೊಂಡಿದೆ. ದ್ವಿತೀಯ ಸ್ಥಾನ ಜೆಪ್ಪು ಆದಿ ಮಹೇಶ್ವರಿ ಕ್ರಿಕೆಟರ್ಸ್‌ ಗಳಿಸಿದೆ.

  ಬಹುಮಾನವನ್ನು ವಿತರಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ದಿ. ಬೊಂಡಾಲ ಜಗನ್ನಾಥ ಶೆಟ್ಟಿಯವರು ಜಿಲ್ಲೆ ಕಂಡ ಓರ್ವ ಧೀಮಂತ ಯುವ ನಾಯಕ. ಯುವಕರನ್ನು ಆರ್ಕಷಿಸುವಂತಹ ಅನೇಕ ಕಾರ್ಯಕ್ರಮಗಳನ್ನು ಜಿಲ್ಲಾದ್ಯಾಂತ ಮಾಡಿಸಿ, ಯುವಕರ ಮನ ಗೆದ್ದಿದ್ದರು. ಅವರ ಗರಡಿಯಲ್ಲಿ ಪಳಗಿದ ಅನೇಕ ನಾಯಕರು ಇಂದು ರಾಜಕೀಯದಲ್ಲಿ ಒಳ್ಳೆಯ ಸ್ಥಾನಗಳನ್ನು ಅಲಂಕರಿಸುತ್ತಿರುವುದು ನಾವೆಲ್ಲಾ ಕಾಣುತ್ತಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಮುಡಾ ಅಧ್ಯಕ್ಷ ಇಬ್ರಾಹೀಂ ಕೊಡಿಜಾಲ್‌ರವರು ಮಾತನಾಡಿ ದಿ ಬೊಂಡಾಲರು ಸಹಿಷ್ಣುತೆಯ ಸಾಕಾರಮೂರ್ತಿ. ಸಮಾಜದ ಎಲ್ಲಾ ವರ್ಗದ ಜನರನ್ನು ಬಹಳ ಗೌರವದಿಂದ ಕಾಣುತ್ತಿದ್ದರು. ಬಹಳ ಸಕ್ರೀಯವಾಗಿ ಪಕ್ಷದ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡಿ ತೋರಿಸುತ್ತಿದ್ದ ಅವರು ಯುವಕರಿಗೆ ಭಾರೀ ಸ್ಪೂರ್ತಿ ತುಂಬುವುದನ್ನು ನಾವೆಲ್ಲರೂ ನೋಡಿದ್ದೇವೆ ಎಂದರು.

 ಕಾರ್ಯಕ್ರಮದಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಕಾರ್ಪೋರೇಟರ್ ಶೈಲಜಾ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಟಿ.ಕೆ. ಸುಧೀರ್, ರಮಾನಂದ ಪೂಜಾರಿ, ಮೋಹನ್ ಮೆಂಡನ್, ಅಬೂಬಕರ್, ಮೊಹಮದ್ ನವಾಜ್, ಅನಿವಾಸಿ ಉದ್ಯಮಿ ಇಕ್ಬಾಲ್, ಭಾಸ್ಕರ್ ರಾವ್, ದಿನೇಶ್ ಪಿ.ಎಸ್. ಶಮೀಮ್, ಲಈಫ್, ಮಾಶೂಕ್, ರಾಯಿಲ್ ಮೊದಲಾದವರು ಉಪಸ್ಥಿತರಿದ್ದರು. ಈ ಪಂದ್ಯಾಟವನ್ನು ಅತ್ತಾವರ ವಾರ್ಡ್ ಯುವ ಕಾಂಗ್ರೆಸ್ ಸಮಿತಿ ಹಾಗೂ ಯು2 ಸ್ಫೋರ್ಟ್ಸ್ ಜೆಪ್ಪು ಕ್ಲಬ್ ಆಯೋಜಿಸಿದ್ದರು.  

ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಯಂಗ್ ಫ್ರೆಂಡ್ಸ್‌ನ ಅಶ್ವಿನ್, ಟೂರ್ನಮೆಂಟ್ ಆಟಗಾರ ಪ್ರಶಸಿತಿಯನ್ನು ಆದಿ ಮಹೇಶ್ವರಿ ತಂಡದ ಕಮಲ್, ಬೆಸ್ಟ್ ಬ್ಯಾಟ್ಸ್‌ಮ್ಯಾನ್ ಪ್ರಶಸ್ತಿಯನ್ನು ಯಂಗ್ ಫ್ರೆಂಡ್ಸ್‌ನ ಜುಬೈರ್, ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಯಂಗ್ ಫ್ರೆಂಡ್ಸ್‌ನ ಪವಾಜ್ ಪಡೆದುಕೊಂಡರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News