ಮಂಗಳೂರು: ದೇರಳಕಟ್ಟೆ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ವಾರ್ಷಿಕ ಮೆಘಾ ವೈದ್ಯಕೀಯ ಶಿಬಿರ

Update: 2016-03-21 13:06 GMT

. ಮಂಗಳೂರು,ಮಾ.21:ಮಂಗಳೂರು ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಫೆ. 15 ರಿಂದ ಮಾ. 15ರ ವರೆಗೆ ಒಂದು ತಿಂಗಳ ಕಾಲ ವಾರ್ಷಿಕ ಮೆಘಾ ವೈದ್ಯಕೀಯ ಶಿಬಿರ ನಡೆಯಿತು. ಈ ಶಿಬಿರದಲ್ಲಿ ಪ್ರಯೋಗಾಲಯದ ಪರೀಕ್ಷೆಗಳು, ರೇಡಿಯಾಲಜಿ ಪರೀಕ್ಷೆಗಳು ಮತ್ತು ಶಸ್ತ್ರಚಿಕಿತ್ಸೆ ಹಾಗೂ ಚಿಕಿತ್ಸೆಗಳನ್ನು ಉಚಿತವಾಗಿ ಮತ್ತು ರಿಯಾಯಿತಿಯಲ್ಲಿ ಮಾಡಲಾಯಿತು. ಪ್ರತಿ ದಿನ ಸರಾಸರಿ 800 ಜನರನ್ನು ಆಕರ್ಷಿಸಿದ ಈ ವೈದ್ಯಕೀಯ ಶಿಬಿರವನ್ನು ಆಸ್ಪತ್ರೆಯ ಸಮಾಜಕಾರ್ಯ ವಿಭಾಗ ಮತ್ತು ಮಾರ್ಕೆಟಿಂಗ್ ವಿಭಾಗವು ಜಂಟಿಯಾಗಿ ಸಂಘಟಿಸಿತು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News