ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

Update: 2016-03-21 16:16 GMT

ಮಂಗಳೂರು,ಮಾ.21: ಮಾ.10 ರಂದು ಮೂಡುಪೆರಾರದಿಂದ ನಾಪತ್ತೆಯಾಗಿದ್ದ ದಾಮೋದರ ಗೌಡ(28) ಅವರ ಶವ ಇಂದು ಮೂಡುಪೆರಾರದ ಮುರ ಎಂಬಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
  ಮೂಡುಪೆರಾರ ಮುರದ ಕಾಡಿನ ದಾರಿಯಲ್ಲಿ ಶವ ಪತ್ತೆಯಾಗಿದ್ದು ಶವವು ಮಲಗಿಕೊಂಡ ಸ್ಥಿತಿಯಲ್ಲಿ ಇತ್ತು. ಇವರು ಒಂದು ವರ್ಷದ ಹಿಂದೆ ಇವರು ಆತ್ಮಹತ್ಯೆಗೂ ಯತ್ನಿಸಿದ್ದರು. ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು. ಬಜ್ಪೆ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News