ಸ್ವಾವಲಂಬನೆಯ ಹಾದಿಯಲ್ಲಿ ನವ ಸಾಕ್ಷರರ ವೃತ್ತಿ ಕೌಶಲ್ಯ ತರಬೇತಿ

Update: 2016-03-21 18:47 GMT


ಮಂಗಳೂರು, ಮಾ.21: ಜಿಲ್ಲೆಯಲ್ಲಿ ಸಾಕ್ಷ ರತೆಯ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡ ನವಸಾಕ್ಷರರು ಕಲಿಕೆಯೊಂದಿಗೆ ಗಳಿಕೆ ಸ್ವಾವಲಂಬನೆಯ ಹಾದಿಯಲ್ಲಿ ಸಾಗಲು ನವಸಾಕ್ಷರರ ವೃತ್ತಿ ಕೌಶಲ್ಯ ತರ ಬೇತಿ ಶಿಬಿರ ನಡೆದಿದೆ.

          ಈ ಶಿಬಿರದ ಮೂಲಕ ಮೂರು ತಿಂಗಳಲ್ಲಿ ದ.ಕ. ಜಿಲ್ಲೆಯ 42 ಗ್ರಾಪಂ ವ್ಯಾಪ್ತಿಯಲ್ಲಿ 44 ಕೇಂದ್ರಗಳ ಮೂಲಕ 613 ಮಂದಿ ತರಬೇತಿ ಪಡೆದಿದ್ದಾರೆ. ದೈನಂದಿನ ಬಳಕೆಯ ಸಾಮಗ್ರಿಗಳಾದ ಹರ್ಬಲ್ ಫಿನಾ ಯಿಲ್, ಸಾಬೂನು, ಸಾಬೂನು ದ್ರಾವಣ, ಸಾಬೂನು ಪೌಡರ್, ಕ್ಲೀನಿಂಗ್ ಪೌಡರ್ ತಯಾರಿಯ ಬಗ್ಗೆ ತರಬೇತಿ ನೀಡಲಾಗಿದೆ. ತರಬೇತಿಯಲ್ಲಿ 592 ಮಹಿಳೆಯರು ಮತ್ತು 21ಪುರುಷರು ಸೇರಿದ್ದಾರೆ. ಈ ಪೈಕಿ 156 ಮಂದಿ ಪರಿಶಿಷ್ಟ ಜಾತಿ, 84 ಪರಿಶಿಷ್ಟ ಪಂಗಡದವರು, 99 ಅಲ್ಪಸಂಖ್ಯಾತ ಸಮು ದಾಯದವರು ಇತರ 274 ಮಹಿಳೆಯರು ತರಬೇತಿ ಪಡೆದಿರುತ್ತಾರೆ. ವ್ಯಕ್ತಿತ್ವ ವಿಕಾಸ, ಕಲಿಕೆ, ಜೀವನ ಸಮೃದ್ಧಿ, ಸ್ವಚ್ಛತೆ, ಮಹಾತ್ಮ ಗಾಂಧಿ ನರೇಗಾ, ಸೌರಶಕ್ತಿ ಬಳಕೆ ಇತ್ಯಾದಿ ವಿಷಯಗಳ ಕುರಿತಾದ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಪ್ರೇರಕರು ಸಂಪನ್ಮೂಲ ವ್ಯಕ್ತಿಗಳಾಗಿ ಯಶಸ್ವಿ ಯಾಗಿ ನಡೆಸಿರುತ್ತಾರೆ. ತರಬೇತಿಯ ಮೂಲಕ ತಯಾರಿಸಲಾದ ಉತ್ಪನ್ನಗಳನ್ನು ಗ್ರಾಪಂಗಳ ಸಹಕಾರದೊಂದಿಗೆ ಗ್ರಾಮ ವಿಕಾಸ ಕೇಂದ್ರ ಮತ್ತು ಅಕ್ಷರ ಅಂಗಡಿಗಳ ಮೂಲಕ ಮಾರಾಟ ಮಾಡಲು ಪ್ರೋತ್ಸಾಹ ನೀಡಲಾಗಿದೆ. ಇದರೊಂದಿಗೆ ಮಹಿಳೆಯರ ಸ್ವ ಉದ್ಯೋಗ ಮತ್ತು ಸ್ವಾವಲಂಬನೆಯ ಬದುಕಿಗೆ ಪೋತ್ಸಾಹ ನೀಡಲಾಗುತ್ತಿದೆ. ಈ ಬಾರಿಯ ವೃತ್ತಿ ಕೌಶಲ್ಯ ತರಬೇತಿ ನಡೆಸಲು ಜಿಪಂ ಸಿಇಒ ಆಸಕ್ತಿ ವಹಿಸಿ ಪ್ರೇರಣೆ, ಪ್ರೊತ್ಸಾಹ ನೀಡಿದ್ದಾರೆ. ತರಬೇತಿಯ ಅವಧಿ ಯಲ್ಲಿ 3 ಪ್ರಗತಿ ಪರಿಶೀಲನಾ ಸಭೆ ನಡೆದಿದೆ.
‘ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರು ತಮಗೆ ತಾವೇ ಸಹಾಯ ಮಾಡಿಕೊಳ್ಳುವ ಮೂಲಕ ಸ್ವಾವಲಂಬನೆಯ ಬದುಕನ್ನು ಸಾಗಿಸಲು ಬೇಕಾಗುವ ವೃತ್ತಿ ಕೌಶಲ್ಯವನ್ನು ಮೈಗೂಡಿಸಿಕೊಳ್ಳಲು, ಬದುಕಿನಲ್ಲಿ ಕಲಿಕೆ, ದುಡಿಮೆ, ಜೀವನ ಸಮೃದ್ಧಿ, ಸ್ವಚ್ಛತೆಯ ವೌಲ್ಯಗಳನ್ನು ಅಳವಡಿಸಿಕೊಳ್ಳಲು ಈ ರೀತಿಯ ಸ್ವಯಂ ಕಲಿಕೆಯ ಶಿಬಿರಗಳು ಸಹಕಾರಿ’ ಎಂದು ಮಹಾತ್ಮ ಗಾಂಧಿ ನರೇಗಾ ಮಾಜಿ ಒಂಬುಡ್ಸ್‌ಮೆನ್ ಶೀನ ಶೆಟ್ಟಿ ತಿಳಿಸಿದ್ದಾರೆ.
ಕೇಂದ್ರದಲ್ಲಿ ತರಬೇತಿ ಪಡೆದ ನವ ಸಾಕ್ಷರರಿಗೆ ಮಾ.22ರಂದು ಜೀವನ ಸಮೃದ್ಧಿ ಶಿಕ್ಷಣ ಮತ್ತು ಪ್ರಮಾಣ ಪತ್ರವಿತರಣಾ ಕಾರ್ಯಕ್ರಮ ಮುಡಿಪು ಜನಶಿಕ್ಷಣ ಟ್ರಸ್ಟ್ ಕಚೇರಿಯ ಸಭಾಂಗಣದಲ್ಲಿ ನಡೆಯಲಿದೆ ಎಂದು ಜನಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಕೃಷ್ಣ ಮೂಲ್ಯ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News