ನಂತೂರು ಅಪಘಾತ: ಉಪನ್ಯಾಸಕಿ ಮೃತ್ಯು

Update: 2016-03-23 18:02 GMT

ಮಂಗಳೂರು, ಮಾ.23: ನಗರದ ನಂತೂರು ಬಳಿ ಇಂದು ಬೆಳಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಸಂತ ಆ್ಯಗ್ನೆಸ್ ಕಾಲೇಜಿನ ಉಪನ್ಯಾಸಕಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.


ಮೃತರನ್ನು ಜಾಯ್‌ಲಿನ್ ಮೊನಿಸ್ (24) ಎಂದು ಗುರುತಿಸಲಾಗಿದೆ.

ಸಂತ ಆ್ಯಗ್ನೆಸ್ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕಿಯಾಗಿರುವ ಇವರು, ಕೊಂಕಣಿ ಮಾಸಿಕ ಪತ್ರಿಕೆಯೊಂದರ ಸಂಪಾದಕ ಜಾನ್ ಮೊನಿಸ್‌ರ ಪುತ್ರಿ ಎಂದು ಹೇಳಲಾಗಿದೆ.


ತನ್ನ ಸಹೋದರಿ ಜತೆ ಆ್ಯಕ್ಟಿವಾ ದ್ವಿಚಕ್ರ ವಾಹನದಲ್ಲಿ ಸಹ ಪ್ರಯಾಣಿಕೆಯಾಗಿ ಸಂಚರಿಸುತ್ತಿದ್ದ ವೇಳೆ ನಂತೂರಿನ ಬಳಿ ರಸ್ತೆಯ ಅಂಚಿನಲ್ಲಿ ಚಾಲಕಿಯ ನಿಯಂತ್ರಣ ತಪ್ಪಿ ವಾಹನ ಉರುಳಿದ ಪರಿಣಾಮ ಜಾಯ್‌ಲಿನ್ ರಸ್ತೆಗೆ ಬಿದ್ದರೆನ್ನಲಾಗಿದೆ. ಹಿಂದಿನಲ್ಲಿ ಸಂಚರಿಸುತ್ತಿದ 15 ನಂಬರಿನ ಬಸ್ಸು ಜಾಯ್‌ಲಿನ್ ಅವರ ಮೇಲಿನಿಂದಲೇ ಸಂಚರಿಸಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟರೆನ್ನಲಾಗಿದೆ. ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಜಾಯ್‌ಲಿನ್ ಸಹೋದರಿ ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.


ಘಟನೆ ಸಂಭವಿಸಿದಾಕ್ಷಣ ಸ್ಥಳದಲ್ಲಿ ಸೇರಿದ ಜನರು ವಾಹನಗಳನ್ನು ನಿಲ್ಲಿಸಿ ಪ್ರತಿಭಟನೆ ಆರಂಭಿಸಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News