ಅಂಬ್ಲಮೊಗರು ಗ್ರಾ.ಪಂ ವಿ.ಎ ಅಧಿಕಾರಿಯನ್ನು ವರ್ಗಾವಣೆಯನ್ನು ಖಂಡಿಸಿ ಡಿವೈಎಫ್‌ಐ, ಸಿಐಟಿಯುನಿಂದ ಪ್ರತಿಭಟನೆ

Update: 2016-03-23 12:49 GMT

ಉಳ್ಳಾಲ. ಮಾ, 23: ನಿಷ್ಠಾವಂತ ಅಧಿಕಾರಿ ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಸಿತಿದ್ದು, ಅತಂಹ ಅಧಿಕಾರಿಗಳಿಂದ ಈ ಗ್ರಾಮ ಲಾಭವಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮತ್ತು ಕಂದಾಯ ಸಚಿವರಿಗೆ ಮಾನವಿ ಮಾಡಿದಿದೆವೆ ಒಂದು ವೇಳೆ ವರ್ಗಾವಣೆ ಮಾಡಿದರೆ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಸಿಐಟಿಯು ಉಳ್ಳಾಲ ಮುಖಂಡ ಜಯಂತ್ ನಾಯಕ್ ಎಚ್ಚರಿಕೆ ನೀಡಿದಾರೆ.
ಅವರು ಅಂಬ್ಲಮೊಗರು ಗ್ರಾಮ ಪಂಚಾಯತ್‌ನ ವಿ.ಎ ಪ್ರಮೋದ್‌ರವರನ್ನು ವರ್ಗಾವಣೆ ಖಂಡಿಸಿ ಡಿವೈಎಫ್‌ಐ ಮತ್ತು ಸಿಐಟಿಯು ಅಂಬ್ಲಮೊಗರು ಗ್ರಾಮ ಪಂಚಾಯತ್ ಎದುರು ನಡೆದ ಪ್ರತಿಭಟಣೆಯಾಲ್ಲಿ ಭಾಗವಹಿಸಿ ಮಾತನಾಡಿದರು.
ಸಾರ್ವಜನಿಕ ರುದ್ರಭೂಮಿಗೆ 1ಎಕ್ರೆ, ನಿವೇಶನಾ ರಹಿತರಿಗೆ 3ಎಕ್ರೆ, ಕ್ರೀಡಾಂಗಣ ನಿರ್ಮಾಣಕ್ಕಾಗಿ 4ಎಕ್ರೆ, ಸರಕಾರಿ ಪ್ರೌಢಶಾಲೆ ನಿರ್ಮಾಣಕ್ಕಾಗಿ 2ಎಕ್ರೆ 29ಸೆಂಟ್ಸ್, ನಿವೇಶನಾ ರಹಿತರಿಗೆ 2.50 ಎಕ್ರೆ ತೆರವುಗೊಳಿಸುವಲ್ಲಿ ಅಂಬ್ಲಮೊಗರು ಗ್ರಾ. ಪಂ ವಿ.ಎ ರವರ ಪಾತ್ರವಿದೆ ಎಂದರು.
ಈ ಸಂದರ್ಭ ಪ್ರತಿಭಟನಾಕರರು ವರ್ಗಾವಣೆ ಮಾಡದಂತೆ ಒತ್ತಾಯಿಸಿದ ಮನವಿಯನ್ನು ಅಂಬ್ಲಮೊಗರು ಗ್ರಾ.ಪಂ ಅಧ್ಯಕ್ಷ ಎಂ.ಎಸ್ ರಫೀಕ್‌ರವರಿಗೆ ನೀಡಿದರು.
ಸಿಪಿಐಎಂ ಅಂಬ್ಲಮೊಗರು ವಲಯ ಕಾರ್ಯದರ್ಶಿ ಜಯಂತ್ ಅಂಬ್ಲಮೊಗರು, ಡಿವೈಎಫ್‌ಐ ಅಂಬ್ಲಮೊಗರು ವಲಯ ಕಾರ್ಯದರ್ಶಿ ಸಲೀಂ, ಸಿಐಟಿಯು ಅಂಬ್ಲಮೊಗರು ವಲಯ ಅಧ್ಯಕ್ಷ ಇಬ್ರಾಹೀಂ, ಉಪಾಧ್ಯಕ್ಷ ಅಬ್ದುಲ್ ಲತೀಫ್, ಡಿವೈಎಫ್‌ಐ ಸದಸ್ಯರಾದ ಇಸ್ಹಾಕ್, ಅಬ್ದುಲ್ ರಝಾಕ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News