ಮಂಗಳೂರು: ‘ಜೆಂಟ್ಸ್ ಗ್ಯಾರೇಜ್’ ಬಟ್ಟೆ ಮಳಿಗೆ ಉದ್ಘಾಟನೆ

Update: 2016-03-23 13:12 GMT

ಮಂಗಳೂರು, ಮಾ. 23: ಪುರುಷರ ಅಪೂರ್ವ ಬಟ್ಟೆಗಳ ಸಂಗ್ರಹ ಹೊಂದಿರುವ ನೂತನ ‘ಜೆಂಟ್ಸ್ ಗ್ಯಾರೇಜ್’ ವಿಸ್ತೃತ ಮಳಿಗೆಯು ನಗರದ ಸಿಟಿ ಸೆಂಟರ್‌ನ ಮೂರನೆ ಮಹಡಿಯಲ್ಲಿ ಮಾರ್ಚ್ 20ರಂದು ಶುಭಾರಂಭಗೊಂಡಿತು.
ಪುರುಷರ ಶರ್ಟಿಂಗ್ಸ್, ಶೂಟಿಂಗ್, ಶರ್ವಾನಿ, ಖುರ್ತಾ, ಮದುವೆಗೆ ಸಂಬಂಧಿಸಿ ಹೊಸ ಡಿಸೈನ್‌ಗಳ ಬಟ್ಟೆಗಳು, ಪುರುಷರ ಬೇಡಿಕೆಗನುಗುಣವಾಗಿ ಹಾಗೂ ಅಭಿರುಚಿಗೆ ತಕ್ಕಂತೆ ಹೊಸ ಮಾದರಿಯ ಬಟ್ಟೆಗಳ ಲಭ್ಯವಿದೆ. ಅಲ್ಲದೆ, ರೇಮಂಡ್, ಅರವಿಂದ್, ಡಿಗ್‌ಜಾಮ್, ಡೊನೇರ್, ವಿಮಲ್, ಸಿಯರಾಮ್ ಸಹಿತ ಇತರ ಬ್ರಾಂಡ್‌ಗಳ ಬಟ್ಟೆಗಳ ಸಂಗ್ರಹ ಮಳಿಗೆಯಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಮಾಲಕ ಶಬ್ಬೀರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News