ಎಸ್ಸೆಸ್ಸೆಫ್‌ ತೊಕ್ಕೊಟ್ಟು ಸೆಕ್ಟರ್‌ ರಿಲೀಫ್ ಸರ್ವಿಸ್ ವತಿಯಿಂದ ಚೆಕ್ ವಿತರಣೆ

Update: 2016-03-24 10:04 GMT

ಉಳ್ಳಾಲ. ಮಾ, 22: ಒಂದು ವರ್ಷಗಳಿಂದ ರೂ. 20 ಲಕ್ಷ ಕ್ಕೂ ಅಧಿಕ ಹಣ ಅರ್ಹ ಬಡವರಗೆ ಸಹಾಯ ನೀಡಿವ ಕಾರ್ಯ ಶ್ಲಾಘನೀಯ ಎಂದು ಎಸ್ಸೆಸ್ಸೆಫ್‌ ಜಿಲ್ಲಾ ಉಪಾಧ್ಯಕ್ಷ ಸಿರಾಜ್ ಸಖಾಫಿ ಕನ್ಯಾನ ಹೆಳಿದರು.
ಅವರು ಎಸ್ಸೆಸ್ಸೆಫ್‌ ತೊಕ್ಕೊಟ್ಟು ಸೆಕ್ಟರ್‌ರಿಲೀಫ್ ಸರ್ವಿಸ್ ವತಿಯಿಂದ ಬಡರೋಗಿಯ ಚಿಕಿತ್ಸೆಗಾಗಿ 25ಸಾವಿರ ರೂ. ಚೆಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಬಡವರಿಗೆ ಸಹಾಯ ಮಾಡುವವರು ದೇವರ ಅತಂತ್ಯ ಅಪ್ತರಾಗಿರುತ್ತಾರೆ ಎಂದು ಪ್ರವಾದಿಯವರು ಈ ಲೋಕಕ್ಕೆ ಸಾರಿದ್ದಾರೆ. ದೇವರು ನಮ್ಮಗೆ ನೀಡಿದ ಸಂಪತ್ತಿನ ಒಂದು ಭಾಗವನ್ನು ಬಡವರಗೆ ಸಂಕಷ್ಟದಲ್ಲಿರುವರಗೆ ಸಹಾಯ ಮಾಡುಲು ಮುಂದೆ ಬರಬೇಕು ಎಂದರು.
ಎಸ್ಸೆಸ್ಸೆಫ್‌ ತೊಕ್ಕೋಟ್ಟು ಸೆಕ್ಟರ್‌ ಇಲ್ಯಾಸ್ ಸಖಾಫಿ, ಕೋಶಾಧಿಕಾರಿ ಸಮೀರ್ ಸೇವಂತಿಗುಡ್ಡೆ, ಎಸ್ಸೆಸ್ಸೆಫ್‌ ಕ್ಯಾಪಸ್ ಕಾರ್ಯದರ್ಶಿ ಬಿ.ಎಸ್‌ ಇಸ್ಮಾಯಿಲ್‌ ಕುತ್ತಾರ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.
ಎಸ್ಸೆಸ್ಸೆಫ್‌ತೊಕ್ಕೊಟ್ಟು ಸೆಕ್ಟರ್‌ ರಿಲೀಫ್ ಸರ್ವಿಸ್ ಚೆಯರ್ ಮ್ಯಾನ್ ಅಲ್ತಾಫ್ ಕುಂಫಲ ಸ್ವಾಗತಿಸಿ, ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ಕಾರ್ಯದರ್ಶಿ ಬಾತಿಶ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News