ಕಾಸರಗೋಡು ಸಬ್ ಜೈಲ್ ನಲ್ಲಿರುವ ಕೈದಿಗಳ ಮೂಲಕ ಉದ್ಯಮ ಆರಂಭಿಸುವ ಕುರಿತು ಚಿಂತನೆ : ಹ್ರಷಿರಾಜ್ ಸಿಂಗ್

Update: 2016-03-24 13:21 GMT

ಕಾಸರಗೋಡು : ಕಾಸರಗೋಡು ಸಬ್ ಜೈಲ್ ನಲ್ಲಿರುವ  ಕೈದಿಗಳ ಮೂಲಕ  ಉದ್ಯಮ ಆರಂಭಿಸುವ  ಕುರಿತು ಚಿಂತನೆ ನಡೆಸಲಾಗಿದ್ದು, ಈ ಕುರಿತು ಅಧ್ಯಯನ ನಡೆಸಲಾಗುತ್ತಿದೆ ಎಂದು ರಾಜ್ಯ ಬಂಧಿಖಾನೆ  ಮಹಾನಿರ್ದೇಶಕ  ಹ್ರಷಿರಾಜ್ ಸಿಂಗ್  ಹೇಳಿದರು.

ಅವರು ಗುರುವಾರ  ಕಾಸರಗೋಡು ಸಬ್ ಜೈಲ್ ಗೆ  ಭೇಟಿ ನೀಡಿದ ಬಳಿಕ ಈ ವಿಷಯ ತಿಳಿಸಿದರು.

ಈಗಾಗಲೇ ರಾಜ್ಯದ ಕೆಲ ಜೈಲು ಗಳಲ್ಲಿ  ಕೈದಿಗಳು  ತಯಾರಿಸುವ  ಚಪಾತಿ ಮತ್ತು ಬಿರಿಯಾನಿಗೆ   ಉತ್ತಮ   ಬೇಡಿಕೆ ಲಭಿಸುತ್ತಿದೆ . ಈ ಹಿನ್ನಲೆಯಲ್ಲಿ  ಸಬ್ ಜೈಲ್ ಗಳಿಗೂ ವಿಸ್ತರಿಸುವ  ಕುರಿತು  ಈಗಾಗಲೇ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

ಕೈದಿ ಗಳಿಗೆ  ಕಂಪ್ಯೂಟರ್ ಶಿಕ್ಷಣ  ನೀಡುವ ಕುರಿತು ಶೀಘ್ರ ತೀರ್ಮಾನ  ತೆಗೆದುಕೊಳ್ಳಲಾಗುವುದು. ಮಾತ್ರವಲ್ಲ ಸಾಬೂನು ತಯಾರಿ  ಕುರಿತು ತರಬೇತಿ ನೀಡಲಾಗುವುದು ಎಂದು  ಹೇಳಿದರು.

ಸಬ್ ಜೈಲ್ ನಲ್ಲಿರುವ  ಸಮಸ್ಯೆಗಳ ಕುರಿತು  ಹ್ರಷಿರಾಜ್  ಸಿಂಗ್   ಮಾಹಿತಿ ಪಡೆದರು.

೨೫ ಕೈದಿ ಗಳಿಗೆ ಮಾತ್ರ ಸೌಲಭ್ಯ ಕಾಸರಗೋಡು  ಸಬ್ ಜೈಲ್ ನಲ್ಲಿದ್ದು , ಆದರೆ ಈಗ ೭೪ ಕೈದಿಗಳನ್ನು ಇರಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ . ಶ್ರೀನಿವಾಸ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News