ರಾಷ್ಟ್ರೀಯ ಮಾನವ ಹಕ್ಕು ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಬಿ. ನಾರಾಯಣ ಶೆಟ್ಟಿ ಆಯ್ಕೆ

Update: 2016-03-25 09:02 GMT

ಪುತ್ತೂರು, ಮಾ.25: ರಾಷ್ಟ್ರೀಯ ಮಾನವ ಹಕ್ಕು ಪ್ರಧಾನ ಕೇಂದ್ರ ಸಮಿತಿಯ ನೂತನ ಅಧ್ಯಕ್ಷರಾಗಿ ಬಿ. ನಾರಾಯಣ ಎಂ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ದಯಾನಂದ ಕೆ. ಶೆಟ್ಟಿ ಆಯ್ಕೆಯಾಗಿದ್ದಾರೆ.


ಇತ್ತೀಚೆಗೆ ಮಹಾರಾಷ್ಟ್ರದ ಬೊರಿವಿಲಿಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.

ಮೋನಿಕಾ ಕೆ.ಡಿ’ಸೋಜ ಉಪಾಧ್ಯಕ್ಷರಾಗಿ ಮತ್ತು ಮಕ್ಕಳ ಹಾಗೂ ಮಹಿಳಾ ಕ್ಷೇಮಾಭಿವೃದ್ಧಿ ನಿರ್ದೇಶಕಿಯಾಗಿ, ನವೀನ್ ಎಸ್. ಪಾಂಡೆ ರಾಷ್ಟ್ರೀಯ ನಿರ್ವಾಹಕ ಕಾರ್ಯದರ್ಶಿಯಾಗಿ ಹಾಗೂ ಟಿ.ಕೆ. ಕೋಟ್ಯಾನ್ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಆಯ್ಕೆಯಾದರು.

ಉದ್ಯಮಿ ಪ್ರಭಾಕರ್ ಆರ್. ಶೆಟ್ಟಿ ಕಾನೂನು ಮತ್ತು ಸಂಶೋಧನಾ ನಿರ್ದೇಶಕರಾಗಿ, ಪ್ರಭಾಕರ ಬಿ.ಶೆಟ್ಟಿ ಅಪರಾಧ ಮತ್ತು ಎಚ್ಚರಿಕೆ ನಿರ್ದೇಶಕರಾಗಿ, ಪತ್ರಕರ್ತ ಪ್ರೇಮನಾಥ ಶೆಟ್ಟಿ ಮುಂಡ್ಕೂರು ಪತ್ರಿಕಾ ಮಾಧ್ಯಮ ಮತ್ತು ಬ್ರಾಡ್‌ಕಾಸ್ಟಿಂಗ್ ನಿರ್ದೇಶಕರಾಗಿ, ಪತ್ರಕರ್ತ ಈಶ್ವರ ಎಂ ಎಲ್ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ, ಲಕ್ಷ್ಮಣ ಪೂಜಾರಿ ರಾಷ್ಟ್ರೀಯ ಸುರಕ್ಷಾ ಮತ್ತು ತಿಳುವಳಿಕೆ ನಿರ್ದೇಶಕ ಹಾಗೂ ರಾಜ್ಯಾಧ್ಯಕ್ಷರಾಗಿ, ಸ್ವೀಪನ್ ರಾಣೆ ಮಾಹಿತಿ ನಿರ್ದೇಶಕರಾಗಿ, ಶಿವರಾಮನ್ ಐಯರ್ ಕಾನೂನು ಸಲಹೆಗಾರರಾಗಿ, ಜಯರಾಮ ಶೆಟ್ಟಿ ಮಾನವ ಹಕ್ಕು ನಿರ್ದೇಶಕರಾಗಿ, ಎಂ.ಡಿ. ಹಾರುನ್ ಖಾನ್ ಅಲ್ಪಸಂಖ್ಯಾತ ಹಾಗೂ ಮೀಸಲಾತಿ ನಿರ್ದೇಶಕರಾಗಿ, ಪ್ರಭುಲ್ ದೇವರ್ ಲೈಂಗಿಕ ಅಲ್ಪಸಂಖ್ಯಾತ ನಿರ್ದೇಶಕರಾಗಿ, ರಾಜ್ಯ ಮಟ್ಟದ ಅಧಿಕಾರಿಗಳಾಗಿ ಗುರುದತ್ತ್ ಪೂಂಜ ಮಹಾರಾಷ್ಟ್ರ ರಾಜ್ಯದ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ, ಮಂಜುನಾಥ್ ಪಶ್ಚಿಮ ವಿಭಾಗ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

     ದಯಾನಂದ ಕೆ.ಶೆಟ್ಟಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News