ಮೂಡುಬಿದಿರೆ : ಇಂದಿನಿಂದ ತೋಡಾರಿನ ಶಂಸುಲ್ ಉಲಮಾ ಅರಬಿಕ್ ಕಾಲೇಜಿನ ವಾರ್ಷಿಕೋತ್ಸವ

Update: 2016-03-25 12:32 GMT

 ಮೂಡುಬಿದಿರೆ : ಜಾಮಿಅ: ನೂರಿಯ್ಯ: ಅರಬಿಯ್ಯ: ಪಟ್ಟಿಕ್ಕಾಡ್ ಇದರ ಅಧೀನ ಸಂಸ್ಥೆಯಾಗಿರುವ ತೋಡಾರಿನ ಶಂಸುಲ್ ಉಲಮಾ ಅರಬಿಕ್ ಕಾಲೇಜಿನ 6ನೇ ವರ್ಷದ ವಾರ್ಷಿಕೋತ್ಸವವು ಇಂದಿನಿಂದ (26, 27) ಎರಡು ದಿನಗಳ ಕಾಲ ನಡೆಯಲಿದ್ದು ಮಾ.27ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಪ್ರಭಾಷಣಗಾರ, ಬಹು ಭಾಷಾ ವಾಗ್ಮಿ ಅಬುದಾಭಿ ಬ್ರಿಟೀಷ್ ಇಂಟರ್‌ನ್ಯಾಶನಲ್ ಇಸ್ಲಾಮಿಕ್ ಸ್ಕೂಲ್‌ನ ಪ್ರೊಫೆಸರ್ ಸಿಂಸಾರುಲ್ ಹಕ್ ಹುದವಿ ಅಬೂಧಾಬಿ ಮುಖ್ಯ ಬಾಷಣಗಾರರಾಗಿ ಭಾವಹಿಸಲಿದ್ದಾರೆ ಎಂದು ಕಾಲೇಜಿನ ಸಂಚಾಲಕ ಸಲೀಂ ಹಂಡೇಲು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

   ಮಾ.26ರಂದು ಮಗ್ರಿಬ್ ನಮಾಜಿನ ನಂತರ ದ್ಸಿಕ್ರ್ ಮಜ್ಲಿಸ್ ಮತ್ತಿ ಅಧ್ಯಾತ್ಮಿಕ ಸಂಗಮ ನಡೆಯಲಿದ್ದು, ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾದ ಕೋಶಾಧಿಕಾರಿ ಹಾಗೂ ಕಾಂಞಂಗಾಡ್ ಸಂಯುಕ್ತ ಜಮಾಅತ್‌ನ ಖಾಝಿ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಞಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಂಬಲಪದವು
ಅಬ್ದುಲ್ ಹಮೀದ್ ಪೈಝಿ ಮುಖ್ಯ ಭಾಷಣವನ್ನು ಮಾಡಲಿದ್ದಾರೆ. ಕೇರಳ ಶೈಖುನಾ ಮಾಹಿನ್ ಉಸ್ತಾದ್ ಚೆರುಕುನ್ನಾ ದ್ಸಿಕ್ರ್ ಮಜ್ಲಿಸ್ ನೇತೃತ್ವ ವಹಿಸಲಿದ್ದಾರೆ.ಸ್ವಾಗತ ಸಮಿತಿಯ ಜನರಲ್ ಕನ್ವೀನರ್ ನಝೀರ್ ಉಳ್ಳಾಲ್ ಉಪಸ್ಥಿತರಿರುವರು.

  

ಮಾ.27ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಮೂಡಿಗೆರೆಯ ಖಾಝಿ, ತೋಡಾರು ಶಂಸುಲ್ ಉಲಮಾ ಅರಬಿಕ್ ಕಾಲೇಜಿನ ಅಧ್ಯಕ್ಷ ಕೇರಳದ ಸಯ್ಯದ್ ಎನ್.ಪಿ.ಎಂ.ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ ಅಧ್ಯಕ್ಷತೆಯಲ್ಲಿ ಸಮಸ್ತ ಕೇಂದ್ರ ಮುಶಾವರದ ಸದಸ್ಯ ಶೈಖುನಾ ಕೆ.ಪಿ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಉದ್ಘಾಟಿಸಲಿದ್ದಾರೆ. ಸಮಸ್ತ ಕೇರಳ ಜಂಯ್ಯಿಯತುಲ್ ಉಲಮಾದ ಪ್ರ.ಕಾರ್ಯದರ್ಶಿ ಶೈಖುನಾ ಶೈಖುಲ್ ಜಾಮಿಅ: ಕೆ.ಆಲಿಕುಟ್ಟಿ ಮುಸ್ಲಿಯಾರ್ ಪ್ರಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.  ಸ್ವಾಗತ ಸಮಿತಿಯ ಅಧ್ಯಕ್ಷ ಅಡ್ಡೂರು ಎಂ.ಎಚ್.ಮೊದಿನ್ ಹಾಜಿ, ತೋಡಾರು ಎಸ್.ಯು.ಎ.ಸಿ ಕಾರ್ಯಾಧ್ಯಕ್ಷ ಉಸ್ಮಾನುಲ್ ಫೈಝಿ, ಉಪಾಧ್ಯಕ್ಷ ಎಂ.ಎಸ್. ಮಹಮ್ಮದ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News