ಮಂಗಳೂರು,ಮಾ.25: ಪೋಲಿಸ್ ಕಾನ್ಸೆಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ- ಸಚಿವ ಡಾ.ಪರಮೇಶ್ವರ

Update: 2016-03-25 14:42 GMT

ಮಂಗಳೂರು,ಮಾ.25:ದ.ಕ.ಜಿಲ್ಲೆಯಲ್ಲಿ ಪೋಲಿಸ್ ಬಲವನ್ನು ವೃದ್ದಿಸಲು ಪೋಲಿಸ್ ಕಾನ್ಸೆಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಗೃಹ ಸಚಿವ ಡಾ.ಪರಮೇಶ್ವರ ಹೇಳಿಕೆ.

 ಈ ಬಗ್ಗೆ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಅವರು ವಿಧಾನಪರಿಷತ್‌ನಲ್ಲಿ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ದ.ಕ.ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 15 ಪೊಲೀಸ್ ಠಾಣೆಗಳು ಹಾಗೂ 5 ಹೊರ ಠಾಣೆಗಳು ಇದ್ದು ಇದರಲ್ಲಿ 667 ಸಂಖ್ಯೆ ಮಂಜೂರಾತಿ ಬಲ ಇದ್ದು ಇದರಲ್ಲಿ 527 ಕರ್ತವ್ಯ ನಿರತ ಆಧಿಕಾರಿಗಳು ಇರುತ್ತಾರೆ. ನಗರ ಕಮೀಷನರೇಟ್ ಗೆ ಸಂಬಂಧಿಸಿದಂತೆ 18 ಪೋಲಿಸ್ ಠಾಣೆಗಳಿದ್ದು 1193 ಮಂಜೂರಾಗಿ ಬಲ 983 ಕರ್ತವ್ಯ ನಿರತ ಅಧಿಕಾರಿ ಸಿಬ್ಬಂದಿ ಬಲ ಇರುತ್ತದೆ.
    ದ.ಕ.ಜಿಲ್ಲಾ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆಸುವ ಸಭೆ ಸಮಾರಂಭಗಳ ಸಮಯದಲ್ಲಿ ಸಂಘಟಕರಿಗೆ ಸಭೆ ನಡೆಸಲು ಅನುಮತಿ ನೀಡುವ ಸಮಯದಲ್ಲಿ ಯಾವುದೇ ಪ್ರಚೋದನಕಾರಿ ಭಾಷಣ ಮಾಡದಂತೆ ಹಾಗೂ ಶಾಂತಿ ಭಂಗಕ್ಕೆ ಅವಕಾಶ ನೀಡದಂತೆ ಸೂಕ್ತ ಷರತ್ತನ್ನು ವಿಧಿಸಿ ಅನುಮತಿಯನ್ನು ನೀಡಲಾಗುತ್ತಿದೆ. ಸಭೆ ಸಮಾರಂಭದ ಸಮಯ ಸಂಪೂರ್ಣ ವಿಡಿಯೋ ಚಿತ್ರಣ ನಡೆಸುತ್ತಿದ್ದು ಯಾವುದೇ ಪ್ರಚೋದನಾಕಾರಿ ಭಾಷಣ ಮಾಡುವುದು ಕಂಡು ಬಂದಲ್ಲಿ ಅಥವಾ ತಿಳಿದು ಬಂದಲ್ಲಿ ಅಂತಹ ವ್ಯಕ್ತಿಗಳ ವಿರುದ್ದ ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ಅಥವಾ ಸ್ವಯಂ ಪ್ರೇರಿತವಾಗಿಯೂ ಅಂತಹ ವ್ಯಕ್ತಿಗಳ ವಿರುದ್ದ ಕಾನೂನು ರೀತಿಯ ಕ್ರಮಗಳನ್ನು ಜರುಗಿಸಲಾಗುತ್ತದೆ. ಪ್ರಚೋದನಕಾರಿ ಭಾಷಣವನ್ನು ಮಾಡುವಂತಹ ವ್ಯಕ್ತಿಗಳು ಸಭೆ ಸಮಾರಂಭಗಳಿಗೆ ಬರುವ ಮುನ್ಸೂಚನೆ ಇದ್ದಲ್ಲಿ ಆ ಬಗ್ಗೆ ಮುಂಚಿತವಾಗಿ ಮಾಹಿತಿ ಸಂಗ್ರಹಿಸಿ ಅವರುಗಳು ಭಾಗವಹಿಸುವ ಸಭೆ ಸಮಾರಂಭಗಳಲ್ಲಿ ಸೂಕ್ತ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳುವುದಲ್ಲದೆ ಜಿಲ್ಲಾಡಳಿತಕ್ಕೆ ಸೂಕ್ತ ವರದಿಯನ್ನು ಸಲ್ಲಿಸಲಾಗುತ್ತದೆ. ಮಂಗಳೂರು ಸೇರಿದಂತೆ ನಗರವೂ ಸೇರಿದಂತೆ ದ.ಕ.ಜಿಲ್ಲೆಯಲ್ಲಿ ಒಟ್ಟು 18 ವ್ಯಕ್ತಿಗಳಿಗೆ ವಿಶೇಷ ಭದ್ರತೆ ಪೋಲಿಸ್ ಗನಮ್ಯಾನ್ ನೀಡಲಾಗಿದೆ.ಇದರಲ್ಲಿ 8 ವ್ಯಕ್ತಿಗಳಿಗೆ ಭದ್ರತ ಶುಲ್ಕ ಪಾವತಿ ಆಧಾರದ ಮೇರೆಗೆ ಹಾಗೂ 10 ವ್ಯಕ್ತಿಗಳಿಗೆ ಸರ್ಕಾರದ ವತಿಯಿಂದ ಭದ್ರತೆಯನ್ನು ಒದಗಿಸಲಾಗಿರುತ್ತದೆ.ದ.ಕ.ಜಿಲ್ಲಾ ಪೋಲಿಸ್ ಠಾಣಾ ಸರ ಹದ್ದಿನಲ್ಲಿ ಭೂಗತಪಾತಕಿ ವ್ಯಕ್ತಿಗಳ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಠಾಣಾ ಮಟ್ಟದಲ್ಲಿ ಗುಪ್ತ ಮಾಹಿತಿಯನ್ನು ಸಂಗ್ರಹಿಸುವಂತೆ ಸಿಬ್ಬಂದಿಗಳನ್ನು ನೇಮಿಸಲಾಗುತ್ತಿದ್ದು ಚಟುವಟಿಕೆಗಳು ಕಂಡು ಬಂದಲ್ಲಿ ಅಂತವರ ವಿರುದ್ದ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಕೊಳ್ಳಲಾಗುವುದು. ಭೂಗತ ಪಾತಕಿಗಳ ಜೊತೆ ಸಂಪರ್ಕವವಿರುವಂತಹ ವ್ಯಕ್ತಿಗಳ ವಿರುದ್ದವೂ ಕಾನೂನು ರೀತಿಯ ಕ್ರಮಗಳನ್ನು ಜರುಗಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News