ಮಂಗಳೂರು: ಮಾರ್ಚ್ 27- ನಿವೇಶನ ರಹಿತರ ಧ್ವಿತೀಯ ಸಮಾವೇಶ

Update: 2016-03-25 14:07 GMT

ಮಂಗಳೂರು,ಮಾ.25:ನಿವೇಶನ ರಹಿತರಿಗೆ ನಿವೇಶನವನ್ನು ನೀಡುವ ಪ್ರಕ್ರಿಯೆಯು ವಿಳಂಬವಾಗುತ್ತಿದ್ದು ಈ ನಿಟ್ಟಿನಲ್ಲಿ ಹೋರಾಟವನ್ನು ಬಲಿಷ್ಠಗೊಳಿಸಲು ಮುಂದಿನ ತೀರ್ಮಾನವನ್ನು ಕೈಗೊಳ್ಳಲು ಮಾರ್ಚ್ 27 ಆದಿತ್ಯವಾರ ಬೆಳ್ಳಿಗ್ಗೆ 10 ಗಂಟೆಗೆ ಎನ್.ಜಿ.ಓ ಹಾಲ್‌ನಲ್ಲಿ ನಿವೇಶನ ರಹಿತರ ಧ್ವಿತೀಯ ಸಮಾವೇಶ ಜರಗಲಿರುವುದು ಎಂದು ಪ್ರಕಟನೆ ತಿಳಿಸಿದೆ.
ಈ ಸಮಾವೇಶಲ್ಲಿ ಮುಖ್ಯ ಅತಿಥಿಯಾಗಿ ಮನಪಾದ ಜಂಟಿ ಆಯುಕ್ತರಾದ ಗೋಕುಲ್‌ದಾಸ್ ನಾಯಕ್ ಭಾಗವಹಿಸಲಿದ್ದು, ಸಿ.ಪಿ.ಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ, ಸಿ.ಪಿ.ಎಂ ಮುಖಂಡರಾದ ಸುನೀಲ್ ಕುಮಾರ್ ಬಜಾಲ್,ಕೃಷ್ಣಪ್ಪ ಕೊಂಚಾಡಿ,ಸಂತೋಷ್ ಶಕ್ತಿನಗರ,ಮನಪಾ ಸದಸ್ಯ ದಯಾನಂದ ಶೆಟ್ಟಿ ಉಪಸ್ಥಿತರಿರುವರು. ನಿವೇಶನ ರಹಿತರ ಹೋರಾಟ ಸಮಿತಿಯ ಅಧ್ಯಕ್ಷ ಪ್ರೇಮನಾಥ ಜಲ್ಲಿಗುಡ್ಡೆ ಅಧ್ಯಕ್ಷತೆ ವಹಿಸಲಿರುವರು.
ನಗರದಲ್ಲಿ ಅನೇಕ ವರ್ಷಗಳಿಂದ ಮನೆ ನಿವೇಶನ ಇಲ್ಲದೆ ಜೀವನ ಸಾಗಿಸುತ್ತಿರುವ ಹಲವಾರು ಬಡ ಕುಟುಂಬಗಳಿಗೆ ನಿವೇಶನವನ್ನು ನೀಡಲು ಒತ್ತಾಯಿಸಿ ನಿವೇಶನ ರಹಿತರನ್ನು ಸಂಘಟಿಸಿ ನಿವೇಶನ ರಹಿತರ ಹೋರಾಟ ಸಮಿತಿ ಹೋರಾಟ ನಡೆಸುತ್ತಾ ಬಂದಿದ್ದು ಈ ಹೋರಾಟದ ಫಲವಗಿ ನಿವೇಶನ ರಹಿತರ ಪಟ್ಟಿಗೆ ಹೆಸರನ್ನು ಸೇರ್ಪಡೆ ಮಾಡಲು ಮಾತ್ರವಲ್ಲದೆ ಮಂಗಳೂರು ಮಹಾ ನಗರ ಪಾಲಿಕೆಯಿಂದ ನಗರದಲ್ಲಿ ನಿವೇಶನವನ್ನು ಗುರುತಿಸುವಂತೆ ಮಾಡಲು ಸಾಧ್ಯವಾಗಿದೆ. ಆದರೆ ನಿವೇಶನ ರಹಿತರಿಗೆ ನಿವೇಶನವನ್ನು ನೀಡುವ ಪ್ರಕ್ರಿಯೆಯು ವಿಳಂಬವಾಗುತ್ತಿರುವುದರಿಂದ ಈ ನಿಟ್ಟಿನಲ್ಲಿ ಹೋರಾಟವನ್ನು ಬಲಿಷ್ಠಗೊಳಿಸಲು ಈ ಸಮಾವೇಶ ಕರೆಯಲಾಗಿದೆ ಎಂದು ನಿವೇಶನ ರಹಿತರ ಹೋರಾಟ ಸಮಿತಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News