ಮಂಗಳೂರಿನಲ್ಲಿ ‘ಐಸ್ ಆ್ಯಂಡ್ ಸ್ಕೇಟ್’ ಸ್ಕೇಟಿಂಗ್ ಸಂಸ್ಥೆ ಉದ್ಘಾಟನೆ

Update: 2016-03-25 15:19 GMT

ಮಂಗಳೂರು,ಮಾ.25: ನಗರದ ಸಿಟಿಸೆಂಟರ್‌ನ ಮೂರನೆ ಮಹಡಿಯಲ್ಲಿ ಫಾಲ್ಕೋನ್ ಎಂಟರ್‌ಪ್ರೈಸಸ್ ಸಂಸ್ಥೆಯು ಮೋತಿಶ್ಯಾಮ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯೊಂದಿಗೆ ಆರಂಭಿಸಿದ ನೂತನ ‘ಐಸ್ ಆ್ಯಂಡ್ ಸ್ಕೇಟ್’ ಎಂಬ ಸ್ಕೇಟಿಂಗ್ ಸಂಸ್ಥೆಯನ್ನು ಮಂಗಳೂರು ಶಾಸಕ ಮೊಯ್ದಿನ್ ಬಾವ ಇಂದು ಉದ್ಘಾಟಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಿಂಗಾಪುರ,ಥೈಲ್ಯಾಂಡ್‌ನಲ್ಲಿ ಜನಪ್ರೀಯವಾಗಿರುವ ಕ್ರೀಡೆಯನ್ನು ಕರ್ನಾಟಕದಲ್ಲಿ ಮೊದಲ ಬಾರಿಗೆ ಮಂಗಳೂರಿನಲ್ಲಿ ಪರಿಚಯಿಸಲಾಗಿದೆ.ಈ ಸಂಸ್ಥೆ ಆರಂಭದ ಮೂಲಕ ಮಂಗಳೂರು ಜನತೆ ಬಯಸಿದ್ದು ಸಿಕ್ಕಿದೆ ಎಂದು ಹೇಳಿದರು.

  ಕಾರ್ಯಕ್ರಮದಲ್ಲಿ ಮಾತನಾಡಿದ ಕ್ರೈಡೈ ಅಧ್ಯಕ್ಷ ಡಿ.ಬಿ.ಮೆಹ್ತಾ ಅವರು ಐಸ್ ಆ್ಯಂಡ್ ಸ್ಕೇಟ್ ಸಂಸ್ಥೆಯು ಸ್ವಿಝರ್‌ಲ್ಯಾಂಡ್‌ನ ವಾತಾವರಣವನ್ನು ಮಂಗಳೂರಿನಲ್ಲಿ ಸೃಷ್ಟಿಸಿದೆ ಎಂದು ಶ್ಲಾಘಿಸಿದರು.

    ಕಾರ್ಯಕ್ರಮದಲ್ಲಿ ಮೋತಿಶಾಮ್ ಸಂಸ್ಥೆಯ ಮ್ಯಾನೆಜಿಂಗ್ ಡೈರೆಕ್ಟರ್ ಎಸ್.ಎಂ ಅರ್ಷದ್ , ಫಾಲ್ಕೋನ್ ಎಂಟರ್‌ಪ್ರೈಸಸ್‌ನ ಎಸ್.ಎಂ.ಸವೂದ್, ಜಮಾಲ್ ಮುಸ್ಬಾ, ಗುಫ್ರಾನ್ ಡಿ.ಎಫ್. ಉಪಸ್ಥಿತರಿದ್ದರು.

    ಐಸ್ ಆ್ಯಂಡ್ ಸ್ಕೇಟ್ ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಆರಂಭಿಸಲಾದ ಸ್ಕೇಟಿಂಗ್ ಸಂಸ್ಥೆ. ವಿದೇಶದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿರುವ ಕ್ರೀಡೆಯಿದು.ಸಾಧಾರಣ ಸ್ಕೇಟಿಂಗ್ ನ ಬದಲಿಗೆ ಇಲ್ಲಿ ಮಾಡುವ ಸ್ಕೇಟಿಂಗ್ ವಿಶೇಷವಾಗಿರುತ್ತದೆ. ಮಂಜುಗಡ್ಡೆಯಲ್ಲಿ ಸ್ಕೇಟಿಂಗ್ ಮಾಡುವ ಮೋಜು ಇಲ್ಲಿ ಸ್ಕೇಟಿಂಗ್ ಮಾಡುವವರಿಗೆ ಸಿಗುತ್ತದೆ. ವಿಶಾಲವಾದ ಜಾಗದಲ್ಲಿ ಮಂಜುಗಡ್ಡೆಯನ್ನು ಹಾಕಲಾಗಿದ್ದು ಇಲ್ಲಿ ಹಿಮದ ರಾಶಿಯಲ್ಲಿ ಸ್ಕೇಟಿಂಗ್ ಮಾಡುವ ಅನುಭವವನ್ನು ನೀಡುತ್ತದೆ.ಮಂಜುಗಡ್ಡೆಯಲ್ಲಿ ಮಾಡುವ ಸ್ಕೇಟಿಂಗ್‌ಗೆ ಅನುಕೂಲವಿರುವ ಸ್ಕೇಟಿಂಗ್ ಶೂವನ್ನು ನೀಡಲಾಗುತ್ತದೆ. ಮಂಗಳೂರಿನಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿ ಸ್ಕೇಟಿಂಗ್ ಪ್ರಿಯರಿದ್ದು ಇವರಿಗೆ ಇಲ್ಲಿ ಹೊಸ ಅನುಭವವನ್ನೆ ನೀಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News