ಸಾಣೂರು: ಬೃಹದಾಕಾರದ ಗುಹೆ ಪತ್ತೆ!

Update: 2016-03-25 18:06 GMT

ಕಾರ್ಕಳ, ಮಾ.25: ಕಾರ್ಕಳ ತಾಲೂಕಿನ ಸಾಣೂರಿನ ಗುರ್ಬೆಟ್ಟು ಎಂಬಲ್ಲಿ ಗುಹೆಯೊಂದು ಗುರುವಾರ ಪತ್ತೆಯಾಗಿದೆ. ಗುರ್ಬೆಟ್ಟು ಹುತ್ತದ ಬಳಿ ಸಣ್ಣ ರಂಧ್ರ ಕಂಡು ಬಂದಿತ್ತು. ಅಲ್ಲಿರುವ ಮಕ್ಕಳು ಆ ರಂಧ್ರಕ್ಕೆ ಕೋಲನ್ನು ಹಾಕುತ್ತಿದ್ದರು. ಆದರೆ ಗುರುವಾರ ಸ್ಥಳೀಯರು ಬಂದು, ಆ ರಂಧ್ರದೊಳಗೆ ಉದ್ದನೆಯ ಕೋಲನ್ನು ಹಾಕಿದಾಗ ಅದು ಅಡಿ ಭಾಗದವರೆಗೆ ಹೋಗಿರುವುದನ್ನು ಗಮನಿಸಿ, ಮೇಲ್ಭಾಗವನ್ನು ಅಗೆದಿದ್ದರು. ಪರಿಣಾಮ ಬೃಹತ್ ಗಾತ್ರದ ಗುಹೆ ಪತ್ತೆಯಾಗಿದೆ. ಜತೆಗೆ ಭಾರೀ ಆಳವನ್ನು ಕೂಡಾ ಹೊಂದಿದೆ. ಇದೊಂದು ಹೊಸ ಅಚ್ಚರಿಯಾಗಿದೆ ಎನ್ನುತ್ತಾರೆ ಸ್ಥಳೀಯರು. ಆಳವಾದ ಗುಹೆಯಾಕಾರಕ್ಕೆ ಇದೀಗ ಮೇಲ್ಭಾಗದಲ್ಲಿ ಕಲ್ಲು ಮುಚ್ಚಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News