ಇಂದಿನಿಂದ ಶಂಸುಲ್ ಉಲಮಾ ಅರಬಿಕ್ ಕಾಲೇಜಿನ ವಾರ್ಷಿಕೋತ್ಸವ

Update: 2016-03-25 18:25 GMT

ಮೂಡುಬಿದಿರೆ, ಮಾ.25: ಕೇರಳ ಪಟ್ಟಿಕ್ಕಾಡ್‌ನ ಜಾಮಿಯಾ ನೂರಿಯಾ ಅರಬಿಯಾದ ಅೀನ ಸಂಸ್ಥೆಯಾಗಿರುವ ತೋಡಾರಿನ ಶಂಸುಲ್ ಉಲಮಾ ಅರಬಿಕ್ ಕಾಲೇಜಿನ 6ನೆ ವಾರ್ಷಿಕೋತ್ಸವವು ಮಾ.26 ಮತ್ತು 27ರಂದು ನಡೆಯಲಿದೆ ಎಂದು ಕಾಲೇಜಿನ ಸಂಚಾಲಕ ಸಲೀಂ ಹಂಡೇಲು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮಾ.27ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ವಾಗ್ಮಿ ಅಬುಧಾಬಿ ಬ್ರಿಟಿಷ್ ಇಂಟರ್‌ನ್ಯಾಶನಲ್ ಇಸ್ಲಾಮಿಕ್ ಸ್ಕೂಲ್‌ನ ಪ್ರೊ. ಸಿಂಸಾರುಲ್ ಹಖ್ ಹುದವಿ ಮುಖ್ಯ ಭಾಷಣಗೈಯುವರು. ಮಾ.26ರಂದು ಮಗ್ರಿಬ್ ನಮಾಝ್ ಬಳಿಕ ದ್ಸಿಕ್ರ್ ಮಜ್ಲಿಸ್ ಮತ್ತು ಅಧ್ಯಾತ್ಮಿಕ ಸಂಗಮ ನಡೆಯಲಿದೆ. ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾದ ಕೋಶಾಕಾರಿ, ಖಾಝಿ ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಳ್ ಕಾರ್ಯಕ್ರಮ ಉದ್ಘಾಟಿಸುವರು. ಅಂಬಲಪದವು ಅಬ್ದುಲ್ ಹಮೀದ್ ೈಝಿ ಮುಖ್ಯ ಭಾಷಣಗೈಯಲಿದ್ದು, ಶೈಖುನಾ ಮಾಹಿನ್ ಉಸ್ತಾದ್ ಚೆರುಕುನ್ನು ದ್ಸಿಕ್ರ್ ಮಜ್ಲಿಸ್ ನೇತೃತ್ವ ವಹಿಸಲಿದ್ದಾರೆ. ಸ್ವಾಗತ ಸಮಿತಿಯ ಜನರಲ್ ಕನ್ವೀನರ್ ನಝೀರ್ ಉಳ್ಳಾಲ್ ಉಪಸ್ಥಿತರಿರುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News