ರಾಷ್ಟ್ರೀಯ ಮಾನವ ಹಕ್ಕು ಕೇಂದ್ರ ಸಮಿತಿಯ ಸಭೆ ಅಧ್ಯಕ್ಷರಾಗಿ ನಾರಾಯಣ ಶೆಟ್ಟಿ ಆಯ್ಕೆ

Update: 2016-03-25 18:27 GMT

ಪುತ್ತೂರು, ಮಾ.25: ರಾಷ್ಟ್ರೀಯ ಮಾನವ ಹಕ್ಕು ಪ್ರಧಾನ ಕೇಂದ್ರ ಸಮಿತಿಯ ನೂತನ ಅಧ್ಯಕ್ಷರಾಗಿ ಬಿ. ನಾರಾಯಣ ಎಂ. ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ದಯಾನಂದ ಕೆ. ಶೆಟ್ಟಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಮಹಾರಾಷ್ಟ್ರದ ಬೊರಿವಿಲಿಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಮುಂದಿನ 3 ವರ್ಷಗಳ ಅವಗೆ ಪದಾಕಾರಿಗಳನ್ನು ಆರಿಸಲಾಯಿತು. ಪಾಧ್ಯಕ್ಷೆ ಮತ್ತು ಮಕ್ಕಳ ಹಾಗೂ ಮಹಿಳಾ ಕ್ಷೇಮಾಭಿವೃದ್ಧಿ ನಿರ್ದೇಶಕಿಯಾಗಿ ಮೋನಿಕಾ ಕೆ.ಡಿಸೋಜ, ರಾಷ್ಟ್ರೀಯ ನಿರ್ವಾಹಕ ಕಾರ್ಯದರ್ಶಿಯಾಗಿ ನವೀನ್ ಎಸ್. ಪಾಂಡೆ ಮತ್ತು ರಾಷ್ಟ್ರೀಯ ಕಾರ್ಯದರ್ಶಿಯಾಗಿ ಟಿ.ಕೆ. ಕೋಟ್ಯಾನ್ ಆಯ್ಕೆಯಾದರು. ಾನೂನು ಮತ್ತು ಸಂಶೋಧನಾ ನಿರ್ದೇ ಶಕರಾಗಿ ಉದ್ಯಮಿ ಪ್ರಭಾಕರ್ ಆರ್. ಶೆಟ್ಟಿ, ಅಪರಾಧ ಮತ್ತು ಎಚ್ಚರಿಕೆ ನಿರ್ದೇ ಶಕರಾಗಿ ಪ್ರಭಾಕರ ಬಿ.ಶೆಟ್ಟಿ, ಪತ್ರಿಕಾ ಮಾಧ್ಯಮ ಮತ್ತು ಬ್ರಾಡ್‌ಕಾಸ್ಟಿಂಗ್ ನಿರ್ದೇಶಕರಾಗಿ ಪತ್ರಕರ್ತ ಪ್ರೇಮನಾಥ ಶೆಟ್ಟಿ ಮುಂಡ್ಕೂರು, ಸಾರ್ವಜನಿಕ ಸಂಪರ್ಕಾಕಾರಿಯಾಗಿ ಪತ್ರಕರ್ತ ಈಶ್ವರ ಎಂ.ಎಲ್., ರಾಷ್ಟ್ರೀಯ ಸುರಕ್ಷಾ ಮತ್ತು ತಿಳುವಳಿಕೆ ನಿರ್ದೇಶಕ ಹಾಗೂ ರಾಜ್ಯಾಧ್ಯಕ್ಷರಾಗಿ ಲಕ್ಷ್ಮಣ ಪೂಜಾರಿ, ಮಾಹಿತಿ ನಿರ್ದೇಶಕರಾಗಿ ಸ್ವೀನ್ ರಾಣೆ, ಕಾನೂನು ಸಲಹೆಗಾರರಾಗಿ ಶಿವರಾಮನ್ ಐಯರ್, ಮಾನವ ಹಕ್ಕು ನಿರ್ದೇಶಕರಾಗಿ ಜಯರಾಮ ಶೆಟ್ಟಿ, ಅಲ್ಪಸಂಖ್ಯಾತ ಹಾಗೂ ಮೀಸಲಾತಿ ನಿರ್ದೇಶಕರಾಗಿ ಎಂ.ಡಿ. ಹಾರೂನ್ ಖಾನ್ , ಲೈಂಗಿಕ ಅಲ್ಪಸಂಖ್ಯಾತ ನಿರ್ದೇಶಕರಾಗಿ ಪ್ರಭುಲ್ ದೇವರ್, ಮಹಾರಾಷ್ಟ್ರ ರಾಜ್ಯದ ಸಾರ್ವಜನಿಕ ಸಂಪರ್ಕಾಕಾರಿಯಾಗಿ ಗುರುದತ್ತ್ ಪೂಂಜ, ಪಶ್ಚಿಮ ವಿಭಾಗ ನಿರ್ದೇಶಕರಾಗಿ ಮಂಜುನಾಥ್ ಆಯ್ಕೆಯಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News