ವಿಶೇಷ ಒಲಿಂಪಿಕ್ಸ್: 28ರಂದು ಮಾನ್ಯತಾ ಪತ್ರ ಸ್ವೀಕಾರ ಸಮಾರಂಭ

Update: 2016-03-25 18:28 GMT

ಮಂಗಳೂರು, ಮಾ.25: ವಿಶೇಷ ಒಲಿಂಪಿಕ್ಸ್ ಭಾರತ್- ಕರ್ನಾಟಕಕ್ಕೆ ನೀಡಿರುವ ಮಾನ್ಯತಾ ಪತ್ರ ಸ್ವೀಕರಿಸುವ ಸಮಾರಂಭ ಮಾ.28ರಂದು ಬೆಳಗ್ಗೆ 10ಕ್ಕೆ ನಗರದ ಪುರಭವನದಲ್ಲಿ ನಡೆಯಲಿದೆ ಎಂದು ರಾಜ್ಯ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರರ ಸಂಘದ ಅಧ್ಯಕ್ಷೆ ಆಗ್ನೇಸ್ ಕುಂದರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವಿಶೇಷ ಒಲಿಂಪಿಕ್ಸ್ ರಾಜ್ಯದ ಏರಿಯಾ ನಿರ್ದೇಶಕ ಆಗಿ ಸಾನಿಧ್ಯ ಆಡಳಿತಾಕಾರಿ ವಸಂತ್ ಕುಮಾರ್ ಶೆಟ್ಟಿ ಅಕಾರ ವಹಿಸಿಕೊಂಡಿದ್ದಾರೆ. ಅವರು ನೂತನ ಸಮಿತಿ ರಚಿಸಿ ಮಾನ್ಯತೆಗಾಗಿ ರಾಷ್ಟ್ರೀಯ ಸಂಸ್ಥೆಗೆ ಕಳುಹಿಸಿದ್ದರು. ಇದೀಗ ರಾಷ್ಟ್ರೀಯ ಕ್ರೀಡಾ ಪ್ರಾಕಾರ, ಕೇಂದ್ರ ಸರಕಾರದ ಯುವಜನ ಸೇವೆ ಮತ್ತು ಕ್ರೀಡಾ ಸಚಿವಾಲಯ ಮತ್ತು ಸ್ಪೆಷಲ್ ಒಲಿಂಪಿಕ್ಸ್ ಭಾರತ್ ಅವರಿಂದ ಮಾನ್ಯತಾ ಪತ್ರ ಬಂದಿದೆ ಎಂದರು.
ಸ್ಪೆಷಲ್ ಒಲಿಂಪಿಕ್ಸ್ ಕ್ರೀಡಾ ಚಟುವಟಿಕೆಗಳ ವ್ಯವಸ್ಥಿತ ನಿರ್ವಹಣೆಗಾಗಿ ಕರ್ನಾಟಕ ರಾಜ್ಯವನ್ನು 8 ವಲಯಗಳಾಗಿ ವಿಂಗಡಿಸಲಾಗಿದೆ. ಪ್ರತಿ ಜಿಲ್ಲೆಗೂ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಮುಂದಿನ ವರ್ಷ ಎಲ್ಲ ಜಿಲ್ಲೆಗಳನ್ನು ಸೇರಿಸಿಕೊಂಡು ವಲಯ, ಜಿಲ್ಲೆ, ರಾಜ್ಯ ಮಟ್ಟದ ವಿವಿಧ ಕ್ರೀಡಾ ಸ್ಪರ್ಧೆ ನಡೆಸಲಾಗುವುದು ಎಂದು ವಸಂತ ಕುಮಾರ್ ಶೆಟ್ಟಿ ತಿಳಿಸಿದರು.
 ರಾಜ್ಯ ವಿಶೇಷ ಶಿಕ್ಷಕರ ಮತ್ತು ಶಿಕ್ಷಕೇತರರ ಸಂಘದ ಜಿಲ್ಲಾಧ್ಯಕ್ಷೆ ಮೀರಾ ಸತೀಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News