ದೇಶ,ಸಮಾಜ ಮುಂದುವರಿಯಬೇಕಾದರೆ ಏಕತೆಯಿಂದ ಮಾತ್ರ ಸಾದ್ಯ - ಶಾಫಿ ಬೆಳ್ಳಾರೆ

Update: 2016-03-25 18:29 GMT

ಮಾರ್ಚ್ 25: ಒಂದು ದೇಶ ಮತ್ತು ದೇಶದ ಜನರು ಮುಂದುವರಿಯಬೇಕಾದರೆ ದೇಶವಾಸಿಗಳು ಏಕತೆಯಿಂದ ಬಾಳಿದರೆ ಮಾತ್ರ ದೇಶ ಮುಂದುವರಿಯುತ್ತದೆ ಸರ್ವ ದರ್ಮದ ಆಚಾರ ವಿಚಾರಗಳನ್ನು ಆಚರಿಸಲು ನಮ್ಮ ದೇಶದ ಸಂವಿದಾನ ಕಾತರೀ ನೀಡಿದರೂ ಬಯಸಿದ್ದನ್ನು ಹೇಳಿದರೆ ಬಯಸಿದ್ದನ್ನು ಬರೆದರೆ ಹತ್ಯೆ ನಡೆಸಲಾಗುತ್ತಿದೆ. ಮಾತ್ರವಲ್ಲದೆ ಜಾನುವಾರು ಸಾಗಾಟದ ಹೆಸರಲ್ಲಿ ಹತ್ಯೆ ನಡೆಸಿ ಮರಕ್ಕೆ ನೇತು ಹಾಕುವ ಹೇಯ ಕ್ರತ್ಯ ಇತ್ತೀಚಿಗಿನ ದಿನಗಳಲ್ಲಿ ನಡೆಯುತ್ತದೆ ಎಂದಾದರೆ ಈ ದೇಶದ ಐಕ್ಯತೆ ಯಾವ ರೀತಿ ಮುಂದುವರಿದಿದೆ. ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಲು ಚಿಂತಿಸುವ ಅಗತ್ಯವಿದೆ.

ಇಲ್ಲಿಯ ಪ್ರತೀಯೊಂದು ಸಮಸ್ಯೆಗಳನ್ನು ಅರಿತು ಅದನ್ನು ಪರಿಹರಿಸುವ ಸಾಮರ್ಥ್ಯ ಮುಸ್ಲಿಮರಿಗೆ ಇದೆ ಎಂಬುದು ಚರಿತ್ರೆ ನಮಗೆ ಕಳಿಸುತ್ತದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವಲಚ್ಚಿಲ್ ಪದವು ವತಿಯಿಂದ ಹಮ್ಮಿಕೋಂಡ  'ಐಕ್ಯತೆ ಕಾಲದ ಬೇಡಿಕೆ' ಎಂಬ ಕಾರ್ಯಕ್ರಮಲ್ಲಿ ಶಾಫಿ ಬೆಳ್ಳಾರೆ ಪಿ.ಎಫ್.ಐ ರಾಜ್ಯ ಕಾರ್ಯದರ್ಷಿ ಮುಖ್ಯ ಬಾಷಣ ಮಡುತ್ತಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಹಮೀದ್ ಮುಸ್ಲಿಯಾರ್ ನಡೆಸಿಕೊಟ್ಟರು
ಮುಖ್ಯ ಅತಿಥಿಗಳಾಗಿ ಹನೀಫ್ ಕಾಟಿಪಳ್ಳ ಅದ್ಯಕ್ಷರು ಪಿ.ಎಫ್.ಐ. ಮಂಗಳೂರು ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು. ಮುಕ್ಯ ಅತಿಥಿಗಳಾಗಿ
ಬಶೀರ್ ಬಜಾಲ್ ವಲಯ ಪಿ.ಎಫ್.ಐ ಅದ್ಯಕ್ಷರು  ಮಂಗಳೂರು.  ನಝೀರ್ ಅದ್ಯಕ್ಷರು ಜುಮ್ಮ ಮಸೀದಿ ವಳಚ್ಚಿಲ್ ಪದವು,  ಮತ್ತು ಸೌತ್ ರೇಂಜ್ ಮೆನೆಜ್ ಮೆಂಟ್. ಯಾಸೀನ್ ಅರ್ಕುಳ ಅದ್ಯಕ್ಷರು ಗ್ರಾಮ ಸಮಿತಿ ಎಸ್.ಡಿ.ಪಿ.ಐ ಅರ್ಕುಳ ಉಪಸ್ತಿತರಿದ್ದರು. ಅಬ್ದುಲ್ ರಶೀದ್ ಅದ್ಯಕ್ಷರು ಪಿ.ಎಫ್.ಐ. ವಲಚ್ಚಿಲ್ ಪದವು ಅರ್ಕುಳ ವಲಯ ಇವರು ಸ್ವಾಗತಿಸಿ ,ಅಕ್ರಮ್ ಸಾವದ್ ದನ್ಯವಾದ ಗೈದರು, ಸೆಲೀಮ್ ಪದವು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News