‘ವೆಸ್ಟ್‌ಲೈನ್ ಬೊನಿಟಾ’ ಇಂದು ಉದ್ಘಾಟನೆ

Update: 2016-03-25 18:30 GMT

ಮಂಗಳೂರು, ಮಾ.25: ವಿನೂತನ ವಿನ್ಯಾಸ ಹಾಗೂ ವಿಶಿಷ್ಟ ನಿರ್ಮಾಣ ಶೈಲಿಯ ಭರವಸೆ ಮೂಡಿಸಿರುವ ನಗರದ ವೆಸ್ಟ್‌ಲೈನ್ ಬಿಲ್ಡರ್ಸ್ ಸಂಸ್ಥೆಯ ನೂತನ ವಸತಿ ಸಮುಚ್ಚಯ ‘ವೆಸ್ಟ್‌ಲೈನ್ ಬೊನಿಟಾ’ ಇದೀಗ ಸಿದ್ಧಗೊಂಡಿದೆ. ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್) 66ರಲ್ಲಿ ತೊಕ್ಕೊಟ್ಟಿನ ಯುನಿಟಿ ಹಾಲ್‌ನ ಎದುರು ನಿರ್ಮಾಣಗೊಂಡಿರುವ ಈ ಯೋಜನೆ ಮಾ.26ರಂದು ಸಂಜೆ 6:30ಕ್ಕೆ ಉದ್ಘಾಟನೆಗೊಳ್ಳಲಿದೆ.

ಪರಿಸರ ಸ್ನೇಹಿ ವಿಧಾನದಲ್ಲಿ ನಿರ್ಮಾಣವಾಗಿರುವ ಕಟ್ಟಡ ವಿಶೇಷ ವಿನ್ಯಾಸ ಹಾಗೂ ಗುಣಮಟ್ಟಕ್ಕಾಗಿ ಈಗಾಗಲೇ ಸ್ಥಳೀಯರಿಂದ ಮೆಚ್ಚುಗೆ ಯನ್ನು ಪಡೆದಿದೆ.

‘ವೆಸ್ಟ್‌ಲೈನ್ ಬೊನಿಟಾ’ ಕಟ್ಟಡದ ಸುತ್ತ ಹಸಿರಿನ ವಾತಾವರಣಕ್ಕೆ ಒತ್ತು ನೀಡಿರುವ ಕಂಪೆನಿಯು, ಈ ವಿಧಾನವನ್ನು ತಮ್ಮ ಮುಂದಿನ ಯೋಜನೆಗಳಲ್ಲೂ ಅಳವಡಿಸಲು ಉದ್ದೇಶಿಸಿದೆ. ಅತ್ಯು ತ್ತಮ ಗುಣಮಟ್ಟದ ಅತ್ಯಾಧುನಿಕ ಸೌಲಭ್ಯಗಳನ್ನು ಇಲ್ಲಿ ಒದಗಿಸಲಾಗಿದೆ. 3,000 ಚದರ ಅಡಿಯ ವಿಶಾಲ ಜಿಮ್ ಮತ್ತು ಇಂಡೋರ್ ಗೇಮ್ಸ್‌ನ ವ್ಯವಸ್ಥೆ ಇಲ್ಲಿದೆ. ಕಟ್ಟಡದ ಸುತ್ತ ಸ್ಫೂರ್ತಿದಾಯಕ ಉಲ್ಲೇಖಗಳನ್ನು ಆಕರ್ಷಕವಾಗಿ ನೇತುಹಾಕಲಾಗಿದೆ. ಸಮಕಾಲೀನ ಬೃಹತ್ತಾದ ಬಾತ್‌ರೂಂಗಳನ್ನು ಒಳಗೊಂಡ ಓಪನ್ ಕ್ಲಬ್ ಹೌಸ್‌ನಲ್ಲಿ ಕಾರ್ಯಕ್ರಮಗಳನ್ನು ನಡೆಸಬಹುದಾಗಿದೆ.


ನಾವು ಪ್ರತಿಯೊಂದು ವಿಭಾಗದಲ್ಲೂ ಗ್ರಾಹಕರಿಗೆ ಭರವಸೆ ನೀಡಿದ್ದಕ್ಕಿಂತ ಹೆಚ್ಚಿನದನ್ನೇ ನೀಡಿದ್ದೇವೆ. ಪೀಠೋಪಕರಣಗಳು, ಸೌಲಭ್ಯಗಳು ಇತ್ಯಾದಿಗಳಲ್ಲಿ ಯಾವುದೇ ರಾಜಿ ಮಾಡದೆ ಅತ್ಯುತ್ತಮ ಗುಣಮಟ್ಟವನ್ನು ಕಾಪಾಡಲಾಗಿದೆ. ಫಿಟ್ಟಿಂಗ್ ಮತ್ತು ಫಿಕ್ಚರ್‌ಗಳಿಗೆ ಉನ್ನತ ಗುಣಮಟ್ಟದ ಸಲಕರಣೆಗಳನ್ನು ಬಳಕೆ ಮಾಡಲಾಗಿದೆ. ಅತ್ಯುತ್ತಮ ದರದಲ್ಲಿ ಉತ್ಕೃಷ್ಟ ಗುಣಮಟ್ಟದ ಮನೆಗಳನ್ನು ನೀಡುವ ಉದ್ದೇಶ ನಮ್ಮದು. ಇದೇ ವೇಳೆ ನಮ್ಮ ಮೇಲೆ ಪೂರ್ಣ ನಂಬಿಕೆ ಇರಿಸಿದ ಗ್ರಾಹಕರಿಗೆ ನಾವು ವಂದನೆಗಳನ್ನು ಸಲ್ಲಿಸುತ್ತೇವೆ.
 -ನಾಸಿರ್ ಮೊಹಿದ್ದೀನ್, ಕಂಪೆನಿಯ ಆಡಳಿತ ನಿರ್ದೇಶಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News