ಕರ್ನಾಟಕ ಕಲಾದರ್ಶಿನಿಯಿಂದ ಕಾರಂತರ ಬ್ಯಾಲೆ

Update: 2016-03-25 18:31 GMT

ಉಡುಪಿ, ಮಾ.25: ಕರಾವಳಿಯ ಜಾನಪದ ಕಲೆಯಾದ ಯಕ್ಷಗಾನವನ್ನು ವಿಶ್ವದ ಪ್ರೇಕ್ಷಕರಿಗೆ ತಲುಪಿಸಲು ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ.ಕೋಟ ಶಿವರಾಮ ಕಾರಂತರು ರೂಪಿಸಿದ ಯಕ್ಷಗಾನ ಬ್ಯಾಲೆಯನ್ನು ಬೆಂಗಳೂರಿನ ಕರ್ನಾಟಕ ಕಲಾದರ್ಶಿನಿ ಪುನರ್‌ರೂಪಿಸಿದ್ದು, ಮಾ.26 ಮತ್ತು 27ರಂದು ಇವುಗಳ ಪ್ರದರ್ಶನ ಸಾಸ್ತಾನ ಹಾಗೂ ಉಡುಪಿಯಲ್ಲಿ ನಡೆಯಲಿದೆ ಎಂದು ಕಲಾದರ್ಶಿನಿಯ ಗೌರವ ಕಾರ್ಯದರ್ಶಿ ಶ್ರೀನಿವಾಸ ಸಾಸ್ತಾನ ತಿಳಿಸಿದ್ದಾರೆ.
ಗುರುವಾರ ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಕಾರಂತರು ನಿರ್ದೇಶಿಸಿದ್ದ ಯಕ್ಷಗಾನ ಬ್ಯಾಲೆ ‘ಅಭಿಮನ್ಯು ವಧೆ’, ‘ಪಂಚವಟಿ’ ಹಾಗೂ ‘ನಳದಮಯಂತಿ’ ಪ್ರಸಂಗಗಳನ್ನು ತಮ್ಮ ತಂಡ ಪ್ರದರ್ಶನಕ್ಕೆ ಸಿದ್ಧಪಡಿಸಿದೆ ಎಂದರು.ಳೆದ ವರ್ಷ ಅಭಿಮನ್ಯು ವಧೆಯ 15 ಪ್ರದರ್ಶನಗಳನ್ನು ವಿವಿಧೆಡೆಗಳಲ್ಲಿ ನಡೆಸಿದ್ದು, ಈ ಬಾರಿ ಪಂಚವಟಿಯನ್ನು 26ರಂದು ಸಾಸ್ತಾನದಲ್ಲಿ ಹಾಗೂ 27ರಂದು ಉಡುಪಿಯ ರಾಜಾಂಗಣದಲ್ಲಿ ಪ್ರದರ್ಶಿಸಲಾಗುವುದು. ಡಾ.ಕಾರಂತರೊಂದಿಗೆ ಬ್ಯಾಲೆಯಲ್ಲಿ ದುಡಿದ ವಿದ್ವಾನ್ ಸುೀರ್ ರಾವ್ ಕೊಡವೂರು ಇವರು ಈಗ ನಿರ್ದೇಶನದ ಹೊಣೆ ಹೊತ್ತುಕೊಂಡಿದ್ದಾರೆ ಎಂದವರು ಹೇಳಿದರು.
ಬ್ಯಾಲೆಯಲ್ಲಿ ಡಾ.ಕಾರಂತರು ಯಕ್ಷಗಾನಕ್ಕೆ ಮೊದಲ ಬಾರಿ ಪರಿಚಯಿಸಿದ ವಯಲಿನ್ ಹಾಗೂ ಸ್ಯಾಕೋ್ಸೆೆನ್‌ಗಳನ್ನು ಮೈಸೂರು ರವಿಕುಮಾರ್ ಹಾಗೂ ಹರಿದಾಸ ಡೊಗ್ರ ಬೆಳ್ತಂಗಡಿ ನುಡಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಚೆನ್ನೆ, ಕೇರಳ, ಆಂಧ್ರ ಪ್ರದೇಶ ಹಾಗೂ ಮಹಾರಾಷ್ಟ್ರಗಳಲ್ಲೂ ಈ ಬ್ಯಾಲೆ ಪ್ರದರ್ಶನ ನೀಡಲಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸುೀರ್‌ರಾವ್ ಕೊಡವೂರು, ಕೃಷ್ಣಮೂರ್ತಿ ಉರಾಳ, ಅಜಿತ್‌ಕುಮಾರ್ ಹಾಗೂ ಸತೀಶ್ ಉಪಾಧ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News