ಮಂಗಳೂರು : ಎ.ಜೆ. ಆಸ್ಪತ್ರೆಗೆ 2015ನೇ ರಾಮಕೃಷ್ಣ ಬಜಾಜ್ ನ್ಯಾಶನಲ್ ಕ್ವಾಲಿಟಿ ಪ್ರಶಸ್ತಿ

Update: 2016-03-26 13:05 GMT

ಮಂಗಳೂರು, ಮಾ. 26: ಎ. ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಇಂಡಿಯನ್ ಮರ್ಚಂಟ್ ಚೇಂಬರ್ಸ್‌ ಇವರಿಂದ 2015ನೇ ವರ್ಷದ ರಾಮಕೃಷ್ಣ ಬಜಾಜ್ ನ್ಯಾಶನಲ್ ಕ್ವಾಲಿಟಿ ಪ್ರಶಸ್ತಿ ಪ್ರಮಾಣಪತ್ರವನ್ನು ಪಡೆಯುವ ಮೂಲಕ ಇನ್ನೊಂದು ಸಾಧನೆಯನ್ನು ಮಾಡಿದೆ. ಸಂಸ್ಥೆಯು ಆರೋಗ್ಯ ಸೇವೆಗಳ ವರ್ಗದಲ್ಲಿ ಪರ್ಫಮೆನ್ಸ್ ಎಕ್ಸಲೆನ್ಸ್ ಪ್ರಶಸ್ತಿಗಾಗಿ ಸ್ಪರ್ಧಿಸಿತ್ತು. ಇಂಡಿಯನ್ ಮರ್ಚಂಟ್ ಚೇಂಬರ್ಸ್‌ ಪ್ರತೀವರ್ಷವು ಗುಣಮಟ್ಟದ ಜಾಗೃತಿಯನ್ನು ಹೊಂದಿರುವ ಭಾರತ ಮತ್ತು ದೇಶಗಳಲ್ಲಿನ ವ್ಯಾಪಾರದ ವಿವಿಧ ಭಾಗಗಳಲ್ಲಿ ಉನ್ನತ ಸೇವೆಯನ್ನು ನೀಡುವ ಸಂಸ್ಥೆಗಳನ್ನು ಆಯ್ಕೆ ಮಾಡಿ ಅವುಗಳಲ್ಲಿನ ಉನ್ನತ ಅಭ್ಯಾಸಗಳು, ಪ್ರಕ್ರಿಯೆಗಳು, ಭವಿಷ್ಯದ ಗುರಿಗಳನ್ನು ಪರಿಶೀಲಿಸಿ ಹೆಚ್ಚಿನ ಪರಿಶೀಲನೆಗಾಗಿ ಎಲ್ಲಾ ದಾಖಲೆಗಳನ್ನು ದೇಶದ ಉನ್ನತ ವ್ಯಾಪಾರ ನಿರ್ವಾಹಕರಿಗೆ ಕಳುಹಿಸಿಕೊಡಲಾಗುತ್ತದೆ. ಈ ಎಲ್ಲಾ ಪರಿಶೀಲನೆಯ ಫಲಿತಾಂಶದ ಮೇಲೆ ಈ ಪ್ರಶಸ್ತಿಯು ನಿರ್ಧರಿತವಾಗಿರುತ್ತದೆ ಹಾಗೂ ಇದು ವ್ಯಾಪಾರ ಕ್ಷೇತ್ರದಲ್ಲಿ ಪ್ರತಿಷ್ಠಿತ ಪ್ರಶಸ್ತಿಯಾಗಿದೆ. ಪೂರ್ವ ಮೌಲ್ಯಮಾಪನಕ್ಕೆ ಒಮ್ಮತದ ಸಭೆಯನ್ನು ಮುಂಬೈಯಲ್ಲಿ ಇಂಡಿಯನ್ ಮರ್ಚಂಟ್ ಚೇಂಬರ್ಸ್‌ನ ಆವರಣದಲ್ಲಿ 2015 ಅಕ್ಟೋಬರ್ 26 ರಂದು ನಡೆಸಲಾಯಿತು. ಈ ಸಭೆಯಲ್ಲಿ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕರಾದ ಡಾ. ಪ್ರಶಾಂತ್ ಮಾರ್ಲ ಮತ್ತು ಅವರ ತಂಡದವರು ಪರೀಕ್ಷಕರ ಸಮ್ಮುಖದಲ್ಲಿ ಆಸ್ಪತ್ರೆಯ ಪ್ರಮುಖ ಲಕ್ಷಣಗಳು ಮತ್ತು ಮುಖ್ಯಾಂಶಗಳನ್ನು ಪ್ರಸ್ತುತ ಪಡಿಸಿದರು.

ಪರೀಕ್ಷಕರು 2015ನೇ ನವೆಂಬರ್ 23 ಮತ್ತು 24ರಂದು ಸಂಸ್ಥೆಗೆ ಬೇಟಿ ನೀಡಿ ಆಸ್ಪತ್ರೆಯು ಪ್ರತಿನಿಧಿಸಿದ ಮಾನದಂಡಗಳ ಪರಿಶೀಲನೆಯನ್ನು ನಡೆಸಿ ಆಸ್ಪತ್ರೆಯು ಪ್ರಶಸ್ತಿಗೆ ಒಳಪಡುತ್ತದೆಂದು ತೀರ್ಪುನೀಡಿದರು.

ಈ ಪ್ರಶಸ್ತಿಯನ್ನು ಡಾ. ಪ್ರಶಾಂತ್ ಮಾರ್ಲ, ವೈದ್ಯಕೀಯ ನಿರ್ದೇಶಕರು ಮುಂಬೈನಲ್ಲಿ 2016ನೇ ಮಾರ್ಚ್ 3 ಮತ್ತು 4 ರಂದು ನಡೆದ ಮೇಕಿಂಗ್ ಕ್ವಾಲಿಟಿ ಹ್ಯಾಪ್ಪನ್ ಕಾನ್ಪರೆನ್ಸ್ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News