ಭೂಮಿಯ ಹಕ್ಕುರಾಷ್ಟ್ರೀಕರಣಗೊಳ್ಳಲಿ: ಪೀರ್ ಬಾಷಾ

Update: 2016-03-26 18:23 GMT

ಮಂಗಳೂರು, ಮಾ.26: ಕೇಂದ್ರ ಸರಕಾರವು ಅಂಬೇಡ್ಕರ್ ನೆನಪಿನಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿರುವ ಅಂಬೇಡ್ಕರ್ ಮಂದಿರ ಅಂಬೇಡ್ಕರ್‌ವಾದವನ್ನು ದಮನ ಮಾಡುವ ಪ್ರಯತ್ನವಾಗಿದೆ. ಅದರ ಬದಲು ಭೂಮಿಯ ಹಕ್ಕನ್ನು ರಾಷ್ಟ್ರೀಕರಣಗೊಳಿಸಿ ಅಂಬೇಡ್ಕರ್‌ರಿಗೆ ಗೌರವ ನೀಡಲಿ ಎಂದು ಹಿರಿಯ ಚಿಂತಕ ಪೀರ್ ಬಾಷಾ ಹೇಳಿದರು.

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಪ್ರತ್ಯೇಕತೆ ನೀತಿ ಅಧ್ಯಯನ ಸಂಸ್ಥೆ , ಅಂಬೇಡ್ಕರ್ ಅಧ್ಯಯನ ಕೇಂದ್ರವು ನಗರದ ರೋಶನಿ ನಿಲಯಲ್ಲಿ ಆಯೋಜಿಸಿದ ‘ಯುವಜನತೆ ಮತ್ತು ಪ್ರಜಾತಂತ್ರಕ್ಕಾಗಿ ಅಂಬೇಡ್ಕರ್’ ಅಭಿಯಾನದ ದ.ಕ. ಜಿಲ್ಲೆಯ ಸರಣಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.ಂಬೇಡ್ಕರ್‌ರ ಮಂದಿರ ನಿರ್ಮಾಣ ದಿಂದ ಅವರ ಭಾವಚಿತ್ರವನ್ನು ತೋರಿ ಸುವ ಪ್ರಯತ್ನವಾಗುತ್ತದೆಯೇ ಹೊರತು ಅಂಬೇಡ್ಕರ್‌ರ ವಾದವನ್ನು ಜಾರಿಗೊಳಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಅಂಬೇಡ್ಕರ್ ಅವರ ವಿಚಾರಕ್ಕೆ ಬೆಂಬಲ ಕೊಟ್ಟಂತಾಗುವುದಿಲ್ಲ ಎಂದರು.ಚ್ಟ*ಮತಬ್ಯಾಂಕ್ ಆಗಿ ದಲಿತರು: ಪ್ರಸಕ್ತ ಪ್ರಭುತ್ವ ಅಂಬೇಡ್ಕರ್ ವಿಚಾರಧಾರೆಗೆ ಒಪ್ಪದೆ ಕೇವಲ ಭಾವಚಿತ್ರವನ್ನು ತೋರಿಸಿ ದಲಿತ ಸಮುದಾಯವನ್ನು ಮತಬ್ಯಾಂಕ್ ಆಗಿ ಸೃಷ್ಟಿಸಲು ಮಾಡುತ್ತಿರುವ ಪ್ರಯತ್ನ ವಿದಾಗಿದೆ ಎಂದು ಆರೋಪಿಸಿದ ಅವರು, ಆರೆಸ್ಸೆಸ್ ಒಂದು ಕಡೆ ಅಂಬೇಡ್ಕರ್‌ರನ್ನು ಹಿಂದೂ ಧರ್ಮದ ಸುಧಾರಕ ಎಂದು ಹೇಳುತ್ತಿದೆ. ಮತ್ತೊಂದೆಡೆ ಅದರ ಮುಖ್ಯಸ್ಥ ಮೀಸಲಾತಿಯ ಬಗ್ಗೆ ಗೊಂದ ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಅಂಬೇಡ್ಕರ್‌ರ ತಾತ್ವಿಕತೆಗೆ ಚುಚ್ಚುವ ಪ್ರಯತ್ನವಾಗಿದೆ. ಅಂಬೇಡ್ಕರ್ ಹಿಂದೂ ಧರ್ಮವನ್ನು ತ್ಯಜಿಸಿ ಐದು ಲಕ್ಷ ಜನರೊಂದಿಗೆ ಬೌದ್ಧ್ದ ಧರ್ಮವನ್ನು ಸ್ವೀಕರಿಸಿದವರು. ಭಾರತ ಮಾತಾಕೀ ಜೈ ಎನ್ನುವಂತಹ, ರಾಷ್ಟ್ರಭಕ್ತಿ,ದೇಶ, ಧರ್ಮ ಎಂಬ ವಿಚಾರದಲ್ಲಿ ಅನಗತ್ಯ ವಾದಗಳನ್ನು ಮಾಡಲಾಗುತ್ತಿದೆ. ಆದರೆ ಅಂಬೇಡ್ಕರ್ ಅವರು ನನಗೆ ಮಾತೃಭೂಮಿಯೆಂಬುದಿಲ್ಲ. ನಾಯಿಗಿಂತ ಕೀಳಾಗಿ ಕಾಣುವ, ನೀರನ್ನು ಕೊಡದ ಈ ಭೂಮಿಯನ್ನು ಮಾತೃಭೂಮಿ ಯೆಂದು ಹೇಗೆ ಹೇಳಲೆಂದು ಕೇಳಿದ್ದರು ಎಂದರು.
ಪ್ರಸಕ್ತ ಅಂಬೇಡ್ಕರ್ ವಿಚಾರದ ಆಧಾರದಲ್ಲಿ ಹುಟ್ಟಿಕೊಳ್ಳಬೇಕಾದ ಚಳವಳಿ ಬರಲಿಲ್ಲ. ಲೋಹಿಯಾರಲ್ಲಿಯೂ ಅಂಬೇಡ್ಕರ್ ಬಗ್ಗೆ ಅನುಮಾನಗಳು ಇತ್ತು. ಕರ್ನಾಟಕದ ದಲಿತ ಚಿಂತಕರು ಅಂಬೇಡ್ಕರ್‌ವಾದಿಗಳಾಗದೆ ಕೇವಲ ಗಾಂಧಿವಾದಿಗಳಾಗಿದ್ದಾರೆ. ದಲಿತ ಚಿಂತಕರು ಗಾಂಧಿವಾದದಿಂದ, ಲೋಹಿ ಯಾವಾದದವರೆಗೆ ಬರುತ್ತಾರೆ. ಆದರೆ ಅಂಬೇಡ್ಕರ್ ವಾದದತ್ತ ಬರುವುದಿಲ್ಲ. ಈ ಕಾರಣದಿಂದಲೇ ರಾಜ್ಯದಲ್ಲಿ ದಲಿತ ಚಳವಳಿಯನ್ನು ಪರಿಣಾಕಾರಿಯಾಗಿ ಕಟ್ಟಲು ಸಾಧ್ಯವಾಗಿಲ್ಲ ಎಂದು ಹೇಳಿದರು.ಾರ್ಯಕ್ರಮವನ್ನು ವಿವಿಧ ಶಾಲೆಯ ವಿದ್ಯಾರ್ಥಿಗಳು ಸಂವಿಧಾನದ ಮುನ್ನುಡಿಯನ್ನು ಓದುವ ಮೂಲಕ ಉದ್ಘಾ ಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಎನ್ನೆಸ್ಸೆಸ್ ಸಂಯೋಜಕಿ ವಿನೀತಾ ರೈ ವಹಿಸಿದ್ದರು.
ಕಾರ್ಯಕ್ರಮ ಸಂಯೋಜಕರಾದ ಮನ್‌ಜಿತ್, ಡಾ.ವಾಸುದೇವ ಬೆಳ್ಳೆ, ಆಶಾಲತಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News