ಕಾಂಗ್ರೆಸ್ ಸೋಲಿಗೆ ಎಸ್‌ಡಿಪಿಐ ಕಾರಣ: ಕೋಡಿಜಾಲ್‌

Update: 2016-03-26 18:28 GMT

ಮಂಗಳೂರು, ಮಾ.26: ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಮತ್ತು ತಾಲೂಕು ಪಂಚಾ ಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮುಸ್ಲಿಮ್ ಅಭ್ಯರ್ಥಿಗಳ ಸೋಲಿಗೆ ಎಸ್‌ಡಿಪಿಐ ಕಾರಣ ವಾಗಿದ್ದು, ಈ ಮೂಲಕ ಆ ಪಕ್ಷವು ಪರೋಕ್ಷವಾಗಿ ಬಿಜೆಪಿ ಅಭ್ಯ ರ್ಥಿಗಳನ್ನು ಗೆಲ್ಲಿಸಿವೆ ಎಂದು ಮಂಗ ಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೋಡಿಜಾಲ್ ಇಬ್ರಾಹೀಂ ಆರೋಪಿ ಸಿದ್ದಾರೆ.

"iಜಮೀಯ್ಯತುಲ್ ಫಲಾಹ್ ವತಿಯಿಂದ ನಗರದ ಕಂಕನಾಡಿಯ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಇಂದು ಸಂಜೆ ಏರ್ಪಡಿಸಲಾದ ಉಡುಪಿ ಮತ್ತು ದ.ಕ. ಜಿಪಂ ಮತ್ತು ತಾಪಂನ ಸಮುದಾಯದ ಚುನಾಯಿತ ಸದಸ್ಯರಿಗೆ ಅಭಿನಂದನಾ ಸಮಾರಂಭವನ್ನುದ್ದೇಶಿಸಿ ಅವರು ಮಾತನಾ ಡುತ್ತಿದ್ದರು.ಲ್ಲಾ ಮತ್ತು ತಾಲೂಕು ಪಂಚಾಯತ್‌ಗಳಲ್ಲಿ ಸ್ಪರ್ಧಿಸಬೇಡಿ. ಈ ಕ್ಷೇತ್ರಗಳಲ್ಲಿ ನಿಮಗೆ ಗೆಲುವು ಅಸಾಧ್ಯ’ ಎಂದು ಎಸ್‌ಡಿಪಿಐಯವರಿಗೆ ಕಿವಿಮಾತು ಹೇಳಿದ್ದೆ. ಆದರೆ, ಅವರು ನನ್ನ ಮಾತಿಗೆ ಮನ್ನಣೆ ನೀಡಿಲ್ಲ. ಇದರಿಂದಾಗಿ ಬಿಜೆಪಿ ಅಭ್ಯರ್ಥಿ ಗಳು ನಿರಾಯಾಸವಾಗಿ ಗೆಲುವು ಸಾಧಿಸು ವಂತಾಯಿತು ಎಂದ ಕೋಡಿಜಾಲ್, ಸಮು ದಾಯದಲ್ಲಿ ಎಲ್ಲಿಯವರೆಗೆ ಒಗ್ಗಟ್ಟು ಇರುವುದಿಲ್ಲವೋ ಅಲ್ಲಿಯವರೆಗೆ ಗಂಡಾ ಂತರವನ್ನು ಎದುರಿಸಬೇಕಾದೀತು ಎಂದು ಎಚ್ಚರಿಸಿದರು.ುಪಿ ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಮುಸ್ಲಿಮರಿಗೆ ಟಿಕೆಟ್ ನೀಡದಿದ್ದುದರಿಂದ ಪಕ್ಷ ಹೀನಾಯ ಸೋಲನ್ನು ಅನುಭ ವಿಸಬೇಕಾಯಿತು. ಈ ಬಗ್ಗೆ ತಾನು ಪಕ್ಷದ ಅಧ್ಯಕ್ಷರಿಗೆ ಮತ್ತು ಮುಖ್ಯ ಮಂತ್ರಿಯವರಿಗೆ ಮನವರಿಕೆ ಮಾಡಿದ್ದೇನೆ. ಪಕ್ಷದಿಂದ ಮುಸ್ಲಿಮರು ಸ್ಪರ್ಧಿಸುವುದನ್ನು ಕಡೆಗಣಿಸ ದಂತೆ ಅವರಿಗೆ ಮನವಿ ಮಾಡಿದ್ದೇನೆ. ಅದಕ್ಕೆ ಅವರು ಒಪ್ಪಿಕೊಂಡಿದ್ದಾರೆ ಎಂದು ಕೋಡಿಜಾಲ್ ತಿಳಿಸಿದರು.ಾರ್ಯಕ್ರಮದ ಅಧ್ಯಕ್ಷತೆಯನ್ನು ಜಮೀಯತುಲ್ ಫಲಾಹ್ ದ.ಕ. ಮತ್ತು ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ಲತೀಫ್ ಸಾಹೇಬ್ ವಹಿಸಿದ್ದರು. ರಾಜ್ಯ ವಕ್ಫ್ ಸಮಿತಿ ಸದಸ್ಯ ವೈ.ಮುಹಮ್ಮದ್ ಕುಂಞಿ, ವಕ್ಫ್ ಸಲಹಾ ಸಮಿತಿಯ ದ.ಕ. ಜಿಲ್ಲಾಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಸ್.ಮುಹಮ್ಮದ್ ಮಸೂದ್, ವಕ್ಫ್ ಸಲಹಾ ಸಮಿತಿಯ ಉಡುಪಿ ಜಿಲ್ಲ್ಲಾಧ್ಯಕ್ಷ ನಕ್ವಾ ಯಹ್ಯಾ, ಸಾದುದ್ದೀನ್ ಸ್ವಾಲಿಹ್, ಜಮೀಯ್ಯತುಲ್ ಫಲಾಹ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶರೀಫ್ ಮೊದಲಾದವರು ಉಪಸ್ಥಿತರಿದ್ದರು.
ಜಿಪಂ ಸದಸ್ಯರಾದ ಶಾಹುಲ್ ಹಮೀದ್, ರಶೀದಾ ಬಾನು, ಎಂ.ಎಸ್. ಮುಹಮ್ಮದ್, ಯು.ಬಿ.ಇಬ್ರಾಹೀಂ, ಮಂಗಳೂರು ತಾಪಂ ಸದಸ್ಯರಾದ ಬಶೀರ್ ಅಹ್ಮದ್, ಅಫ್ಸತ್, ಬಿ.ಕೆ.ಅಬ್ದುಲ್ ಜಬ್ಬಾರ್, ಅಬೂಬಕರ್ ಸಿದ್ದೀಕ್, ಬಂಟ್ವಾಳ ತಾಪಂ ಸದಸ್ಯರಾದ ನಸೀಮಾ ಬೇಗಂ, ಅಬ್ಬಾಸ್ ಅಲಿ ಬಿ.ಎಂ., ಆದಂ ಕುಂಞಿ, ಉಸ್ಮಾನ್ ಕರೋಪಾಡಿ, ಪುತ್ತೂರು ತಾಪಂ ಸದಸ್ಯ ಫಝಲ್ ಕೋಡಿಂಬಾಳ, ಸುಳ್ಯ ತಾಪಂ ಸದಸ್ಯ ಅಬ್ದುಲ್ ಗಫೂರ್, ಉಡುಪಿ ತಾಪಂ ಸದಸ್ಯ ದಸ್ತಗೀರ್ ವೌಲಾನಾರನ್ನು ಅಭಿನಂದಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News