ಇಂದಿನ ಕಾರ್ಯಕ್ರಮ

Update: 2016-03-26 18:55 GMT

ಸಮಾರೋಪ: ಬೆಂಗಳೂರು ರಾಷ್ಟ್ರೀಯ ಕಾನೂನು ಶಾಲೆಯ ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಪ್ರತ್ಯೇಕತೆ ನೀತಿ ಅಧ್ಯಯನ ಸಂಸ್ಥೆ, ಅಂಬೇಡ್ಕರ್ ಅಧ್ಯಯನ ಕೇಂದ್ರದ ವತಿಯಿಂದ ನಡೆದ ಅಂಬೇಡ್ಕರ್ ಅಭಿಯಾನದ ಸಮಾರೋಪ ಸಮಾರಂಭ ಮತ್ತು ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ. ಸಮಯ: ಅಪರಾಹ್ನ 2:30ರಿಂದ. ಸ್ಥ: ಡಾನ್‌ಬಾಸ್ಕೋ ಹಾಲ್, 3ನೆ ಮಹಡಿ, ಉಡುಪಿ.

ಶತಮಾನೋತ್ಸವ ಸಮಾರೋಪ: ಉಡುಪಿ ಟೀಚರ್ಸ್‌ ಕೋ-ಆಪರೇಟಿವ್ ಬ್ಯಾಂಕ್‌ನ ಶತಮಾನೋತ್ಸವದ ಸಮಾರೋಪ ಸಮಾರಂಭ. ಸಮಯ: ಬೆಳಗ್ಗೆ 10ಕ್ಕೆ. ಸ್ಥಳ: ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪ, ಉಡುಪಿ.

ವಿಶ್ವ ರಂಗಭೂಮಿ ದಿನಾಚರಣೆ: ನಾಟಕ ಅಕಾಡಮಿ ಬೆಂಗಳೂರು ಹಾಗೂ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ ಇವರ ಜಂಟಿ ಆಶ್ರಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ. ಸಮಯ: ಬೆಳಗ್ಗೆ 10:30ಕ್ಕೆ. ಸ್ಥಳ: ಕಮಲ ಬಾಳಿಗಾ ಹಾಲ್, ಡಾ.ಎ.ವಿ.ಬಾಳಿಗಾ ಆಸ್ಪತ್ರೆ, ದೊಡ್ಡಣಗುಡ್ಡೆ ಉಡುಪಿ.
 

ಕೊಂಕಣಿ ಕಾರ್ಯಾಗಾರ: ಕೊಂಕಣಿ ಸಂಸಾರ ಪ್ರತಿಷ್ಠಾನ ಮಣಿಪಾಲ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಮಂಗಳೂರು, ವಿಶ್ವ ಕೊಂಕಣಿ ಕೇಂದ್ರ ಮಂಗಳೂರು ಹಾಗೂ ಎಂಜಿಎಂ ಕಾಲೇಜು ಉಡುಪಿ ಇವುಗಳ ಸಹಯೋಗದಲ್ಲಿ ಆಯೋಜಿಸಿರುವ ಕೊಂಕಣಿ ಸಾಹಿತ್ಯ ಮತ್ತು ಭಾಷಾ ಕಾರ್ಯಾಗಾರ. ಸಮಯ: ಬೆಳಗ್ಗೆ 9ಕ್ಕೆ. ಸ್ಥಳ: ಎಂಜಿಎಂ ಕಾಲೇಜಿನ ಆಡಿಯೋ-ವಿಶುವಲ್ ಹಾಲ್ ಉಡುಪಿ.

ವಿಶಂತಿ ಉದ್ಘಾಟನೆ: ಸುಹಾಸಂನ ವಿಶಂತಿ ಸರಣಿ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಶಾಂತರಾಜ ಐತಾಳರ ಕೃತಿ ಲೋಕಾರ್ಪಣೆ. ಸಮಯ: ಸಂಜೆ 4ಕ್ಕೆ. ಸ್ಥಳ: ಹೊಟೇಲ್ ಕಿದಿಯೂರಿನ ಪವನ್ ರೂಫ್‌ಟಾಪ್ ಉಡುಪಿ.

ಪ್ರಶಸ್ತಿ ಪ್ರದಾನ: ತುಳುಕೂಟ ಉಡುಪಿ ವತಿಯಿಂದ ಮಲ್ಪೆ ರಾಮದಾಸ ಸಾಮಗರ ನೆನಪು, ಕಲಾವಿದ ಪೆರುವಾಯಿ ನಾರಾಯಣ ಶೆಟ್ಟಿರಿಗೆ ಸಾಮಗ ಪ್ರಶಸ್ತಿ ಪ್ರದಾನ ಹಾಗೂ ತುಳು ಪೌರಾಣಿಕ ಯಕ್ಷಗಾನ. ಸಮಯ: ಸಂಜೆ 5:30ಕ್ಕೆ. ಸ್ಥಳ: ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪ, ಉಡುಪಿ.

ಅಭಿಯಾನ ಸಮಾರೋಪ: ಜಿಲ್ಲಾ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ಕುರ್‌ಆನ್ ಎಲ್ಲರಿಗಾಗಿ ಅಭಿಯಾನದ ಸಮಾರೋಪ ಸಮಾರಂಭ ‘ಸಮಾಜದ ನವನಿರ್ಮಾಣ ಮತ್ತು ಧರ್ಮಗ್ರಂಥಗಳು’. ಸಮಯ: ಸಂಜೆ 7ಕ್ಕೆ. ಸ್ಥಳ: ಪುರಭವನ, ಅಜ್ಜರಕಾಡು ಉಡುಪಿ.

ರಾಷ್ಟ್ರೀಯ ಭಾವೈಕ್ಯ: ಕೇಂದ್ರ ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ಸಂಘಟನೆ ಕರ್ನಾಟಕ ವಲಯ ಹಾಗೂ ನೆಹರೂ ಯುವ ಕೇಂದ್ರ ಉಡುಪಿ ಇವುಗಳ ವತಿಯಿಂದ ರಾಷ್ಟ್ರೀಯ ಭಾವೈಕ್ಯತಾ ಜಾನಪದ ನೃತ್ಯೋತ್ಸವ ಉದ್ಘಾಟನೆ. ಸಮಯ: ಪೂರ್ವಾಹ್ನ 11ಕ್ಕೆ. ಸ್ಥಳ: ಪುರಭವನ, ಅಜ್ಜರಕಾಡು ಉಡುಪಿ.

ಕಾರಂತರ ಬ್ಯಾಲೆ: ಬೆಂಗಳೂರಿನ ಕರ್ನಾಟಕ ಕಲಾದರ್ಶಿನಿಯಿಂದ ಡಾ.ಕೆ.ಶಿವರಾಮ ಕಾರಂತ ಉತ್ಸವದಲ್ಲಿ ಕಾರಂತರು ನಿರ್ದೇಶಿಸಿದ ಯಕ್ಷಗಾನ ಬ್ಯಾಲೆ ‘ಪಂಚವಟಿ’ಯ ಪುನರ್‌ಪ್ರದರ್ಶನ. ಸಭಾ ಕಾರ್ಯಕ್ರಮ. ಸಮಯ: ಸಂಜೆ 7ಕ್ಕೆ. ಸ್ಥಳ: ಶ್ರೀಕೃಷ್ಣ ಮಠದ ರಾಜಾಂಗಣ, ಉಡುಪಿ.

ಜಾನಪದ ನೃತ್ಯೋತ್ಸವ: ನೆಹರೂಯುವ ಕೇಂದ್ರದ ವತಿಯಿಂದ ರಾಷ್ಟ್ರೀಯ ಭಾವೈಕ್ಯತಾ ಜಾನಪದ ನೃತ್ಯೋತ್ಸವ ಉದ್ಘಾಟನೆ . ಸಮಯ: ಸಂಜೆ 5:30ಕ್ಕೆ. ಸ್ಥಳ: ಮಲ್ಪೆ ಸಮುದ್ರ ಕಿನಾರೆ, ಮಲ್ಪೆ.

ವಿಶ್ವ ರಂಗಭೂಮಿ ದಿನಾಚರಣೆ: ನಮ ತುಳುವೆರ್ ಕಲಾ ಸಂಘಟನೆ ನಾಟ್ಕದೂರು ಮುದ್ರಾಡಿ ಇವರಿಂದ ವಿಶ್ವ ರಂಗಭೂಮಿ ದಿನಾಚರಣೆ ಹಾಗೂ ‘ಮೂರು ಹೆಜ್ಜೆ ಮೂರು ಲೋಕ’ ನಾಟಕದ 97ನೆ ಪ್ರದರ್ಶನ ಉದ್ಘಾಟನೆ. ಸಮಯ: ಸಂಜೆ 7ಕ್ಕೆ. ಸ್ಥಳ: ನಾಟ್ಕದೂರು, ಮುದ್ರಾಡಿ.

ಉಚಿತ ಹಿಜಾಮ ಚಿಕಿತ್ಸೆ:
ಗಂಗೊಳ್ಳಿಯ ಫ್ರೆಂಡ್ಸ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಹಾಗೂ ಮಂಗಳೂರಿನ ಅಲ್‌ಫೈನ್ ಅಸೋಸಿಯೇಟ್ಸ್ ಆಶ್ರಯದಲ್ಲಿ ಉಚಿತ ಹಿಜಾಮ ಚಿಕಿತ್ಸಾ ಶಿಬಿರ. ಸಮಯ: ಬೆಳಗ್ಗೆ 8ರಿಂದ ಸಂಜೆ 5ರವರೆಗೆ. ಸ್ಥಳ: ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಗಂಗೊಳ್ಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News