ಭಿನ್ನಭಿಪ್ರಾಯ ವ್ಯಕ್ತಪಡಿಸುವ ವಿದ್ಯಾರ್ಥಿಗಳ ಮೇಲಿನ ದಾಳಿ ಶೋಚನೀಯ: ಕ್ಯಾಂಪಸ್ ಫ್ರಂಟ್

Update: 2016-03-27 13:26 GMT

ಕೇರಳದ ಕ್ಯಾಂಪಸ್‌ನಲ್ಲಿ ಎಸ್‌ಐಒ ವಿದ್ಯಾರ್ಥಿಗಳ ಮೇಲೆ ಪೋಲೀಸರು ನಡೆಸಿದಂತಹ ಲಾಠಿಚಾರ್ಜ್‌ನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕನಾಟಕ ರಾಜ್ಯ ಸಮಿತಿಯು ತೀರ್ವವಾಗಿ ಖಂಡಿಸುತ್ತದೆ. ಸುಮಾರು 40ರಷ್ಟು ವಿದ್ಯಾರ್ಥಿಗಳು ದೈಹಿಕವಾಗಿ ದಾಳಿಗೊಳಗಾಗಿದ್ದು, ಬೀಚ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಹೈದರಾಬಾದ್ ವಿವಿಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಮೇಲಿನ ದಾಳಿ ಮತ್ತು ಅನಿಯಂತ್ರಿತ ಶಕ್ತಿಗಳ ಷಡ್ಯಂತ್ರದ ವಿರುದ್ಧ ಎಸ್‌ಐಒ ವಿದ್ಯಾರ್ಥಿಗಳು ಕೇರಳದ ಕ್ಯಾಂಪಸ್‌ಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಆ ಸಂಧರ್ಭದಲ್ಲಿ ಎಸ್‌ಐಒ ವಿದ್ಯಾರ್ಥಿಗಳ ಮೇಲೆ ಕ್ರೂರ ರೀತಿಯಲ್ಲಿ ಪೋಲೀಸರನ್ನು ಬಳಸಿಕೊಂಡು ನಡೆಸಿದಂತಹ ದೌರ್ಜನ್ಯವು ಇತ್ತೀಚಿಗೆ ವಿದ್ಯಾರ್ಥಿಗಳ ಹಕ್ಕುಗಳ ಮೇಲಿನ ದಾಳಿಗಳ ಮುಂದುವರಿದ ಭಾಗವಾಗಿದೆ. ಕೇರಳದಲ್ಲಿ ಕಾಂಗ್ರೆಸ್ ಸರಕಾರ ಆಡಳಿತ ನಡೆಸುತ್ತಿರುವಾಗ ವಿದ್ಯಾರ್ಥಿಗಳ ಮೇಲೆ ಈ ರೀತಿಯ ದಾಳಿ ನಡೆದಿರುವುದು ದುರಂತವಾಗಿದೆ.
ಸಮಾಜದ ಉನ್ನತಿಗಾಗಿ ವಿದ್ಯಾರ್ಥಿಗಳು ಕೆಲಸ ಮಾಡುತ್ತಿರುವಾಗ ಮತ್ತು ಅನ್ಯಾಯದ ವಿರುದ್ಧ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವಾಗ ಅದರ ವಿರುದ್ಧ ಫ್ಯಾಶಿಷ್ಟ್ ಶಕ್ತಿಗಳು ದಾಳಿ ಮಾಡುತ್ತಿವೆ ಎಂಬುದು ಸ್ಪಷ್ಟವಾಗುತ್ತಿದೆ. ದೆಹಲಿಯಿಂದ ಕ್ಯಾಲಿಕಟ್‌ವರೆಗೆ, ಎನ್‌ಡಿಯೆಯಿಂದ ಯುಪಿಯೆ ವರೆಗಿನ ಸರಕಾರಗಳು ವಿದ್ಯಾರ್ಥಿ ಶಕ್ತಿಗಳ ಮೇಲೆ ಗೂಂಡಾಗಳು ಮತ್ತು ಪೋಲೀಸ್ ಶಕ್ತಿಗಳ ಮೂಲಕ ದಾಳಿ ಮಾಡುತ್ತಿರುವುದು, ಭಾರತೀಯ ವಿದ್ಯಾರ್ಥಿ ಚಳುವಳಿಗಳ ಮೇಲೆ ಮತ್ತು ಸಮಾಜದ ವೆುೀಲೆ ವ್ಯತಿರಿಕ್ತ ಪರಿಣಾಮ ಬೀಳಲಿದೆ.
 ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾವು ದಾಳಿಗೊಳಗಾದ ಎಸ್‌ಐಒ ವಿದ್ಯಾರ್ಥಿಗಳ ಪರವಾಗಿ ನ್ಯಾಯಕ್ಕಾಗಿ ಕೈಜೋಡಿಸಲಿದೆ, ಹಾಗೂ ಈ ದಾಲಿಗೆ ಕಾರಣಕರ್ತರಾದ ಎಲ್ಲಾ ಅಧಿಕಾರಿಗಳ ವಿರುದ್ಧ ಕೇರಳ ಸರಕಾರವು ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತದೆ, ಅದೇ ರೀತಿ ಸರಕಾರವು ಕ್ರಮಕೈಗೊಳ್ಳದಿದ್ದಲ್ಲಿ ನ್ಯಾಯಾಂಗವು ಸ್ವಹಿತಾಸಕ್ತಿಯಿಂದ ತನಿಖೆಗೊಳಪಡಿಸಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಬ್ದುಲ್ ರಹೀಂ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News