ಶಂಸುಲ್ ಉಲಮಾ ಕಾಲೇಜಿನ ವಾರ್ಷಿಕೋತ್ಸವ ಸಮಾರೋಪ

Update: 2016-03-27 18:51 GMT

ಮೂಡುಬಿದಿರೆ, ಮಾ.27: ತೋಡಾರಿನ ಶಂಸುಲ್ ಉಲಮಾ ಅರಬಿಕ್ ಕಾಲೇಜಿನ 6ನೆ ವಾರ್ಷಿಕ ಮಹಾಸಮ್ಮೇಳನದ ಸಮಾರೋಪ ಸಮಾರಂಭ ರವಿವಾರ ರಾತ್ರಿ ನಡೆ ಯಿತು.
ಸೈಯದ್ ಅಲಿ ತಂಙಳ್ ಕುಂಬೋಳ್ ದುಆ ನಿರ್ವಹಿಸಿ ಕಾರ್ಯ ಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿ ದರು. ಬಳಿಕ ಮಾತನಾಡಿದ ಅವರು, ಸರ್ವ ಕಾಲಕ್ಕೂ ಅನ್ವಯವಾ ಗುವ ಹಾಗೂ ಸೇವಾ ಮನೋಭಾವ ಇರುವಂತಹ ಶಿಕ್ಷಿತ ವರ್ಗವು ಈ ಸಂಸ್ಥೆಯಿಂದ ಉದಯಿಸಲಿ ಎಂದು ಹಾರೈಸಿದರು.
ಅಂತಾರಾಷ್ಟ್ರೀಯ ಖ್ಯಾತಿಯ ಭಾಷಣಗಾರ, ಸಿಂಸಾರುಲ್ ಹಕ್ ಹುದವಿ ಅಬುಧಾಬಿ ಮುಖ್ಯ ಭಾಷ ಣಗೈದರು.
ಶಂಸುಲ್ ಉಲಮಾ ಅವಾರ್ಡ್ 2015-16 ಪ್ರದಾನ: ಇದೇ ಸಂದರ್ಭ ಸಾಮಾಜಿಕ ಸೇವಾರಂಗದಲ್ಲಿ ಉನ್ನತ ಸಾಧನೆಗೈದ ಅಪರೂಪದ ಸಾಧಕ ಕಾರ್ಕಳ ಶಬ್ಬೀರಿಯಾ ಅರಬಿಕ್ ಕಾಲೇಜಿನ ಸ್ಥಾಪಕ ಶಬೀರ್ ಹಾಜಿಯವರಿಗೆ ಸಂಸ್ಥೆಯ ವತಿ ಯಿಂದ ನೀಡುವ ‘ಶಂಸುಲ್ ಉಲಮಾ ಅವಾರ್ಡ್ 2015-16’ ಪ್ರದಾನ ಮಾಡಿ ಗೌರವಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಕೆ.ಎಂ.ಉಸ್ಮಾನುಲ್ ಫೈಝಿ ಪ್ರಾಸ್ತಾವಿಕ ಭಾಷಣ ಮಾಡಿದರು. ವೇದಿಕೆಯಲ್ಲಿ ಸೈಯದ್ ಕರಾವಳಿ ತಂಙಳ್, ಸೈಯದ್ ಶರಫುದ್ದೀನ್ ತಂಙಳ್, ಸೈಯದ್ ಅಮೀರ್ ತಂಙಳ್, ಸಂಸ್ಥೆಯ ಉಪಾಧ್ಯಕ್ಷ ಬಿಎಂಕೆ ಮುಹಿಯುದ್ದೀನ್ ಹಾಜಿ, ಪ್ರಾಂಶುಪಾಲ ರಫೀಕ್ ಹುದವಿ ಕೋಲಾರ, ಮುಡಾ ಅಧ್ಯಕ್ಷ ಇಬ್ರಾಹೀಂ ಹಾಜಿ ಕೋಡಿಜಾಲ್, ತೋಡಾರು ಜುಮಾ ಮಸೀದಿಯ ಅಧ್ಯಕ್ಷ ಎಂ.ಎ.ಎಸ್.ಅಬೂಬಕರ್, ಎಂಎಚ್ ಹಾಜಿ ಅಡ್ಡೂರು, ದುಬೈ ಸಮಿತಿಯ ನೂರುದ್ದೀನ್ ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ವರ್ಕಿಂಗ್ ಸೆಕ್ರೆಟರಿ ಇಸ್ಹಾಕ್ ಹಾಜಿ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಅಹ್ಮದ್ ನಈಂ ಮುಕ್ವೆ, ಸಫ್ವಾನ್ ಸುಂಕದಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸಂಚಾಲಕ ಸಲೀಂ ಹಂಡೇಲ್ ವಂದಿಸಿದರು.
ವಾರ್ಷಿಕೋತ್ಸವದ ಅಂಗವಾಗಿ ಬೃಹತ್ ದ್ಸಿಕ್ರ್ ಮಜ್ಲಿಸ್, ಸೆಮಿನಾರ್‌ಗಳು ನಡೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News