ಕಾಸರಗೋಡು: ತಣ್ಣೀರ ಚಪ್ಪರ ( ತಣ್ಣೀರ್ ಪಂದಲ್ ) ಉದ್ಘಾಟನೆ

Update: 2016-03-28 09:36 GMT

ಕಾಸರಗೋಡು, ಮಾ.28: ಮಾರ್ಚ್ 22 ರಿಂದ ಮೇ 22 ರವರೆಗೆ ಆಚರಿಸುವ ವಿಶ್ವ ಜಲ ದಿನದ ಅಂಗವಾಗಿ ಎಸ್.ಕೆ.ಎಸ್.ಬಿ.ವಿ ಮಿಸ್ಬಾಹುಲ್ ಉಲೂಂ ಮದ್ರಸ ತೆಕ್ಕ್ ಪುರಂ,  ಪೂಚ್ಚಕ್ಕಾಡ್ ಇದರ ನೇತೃತ್ವದಲ್ಲಿ ನಡೆದ ತಣ್ಣೀರು ಚಪ್ಪರ  ಕುಡಿಯುವ ನೀರಿನ ಪದ್ಧತಿಯನ್ನು ಮುಹಮ್ಮದ್ ಇಕ್ಬಾಲ್ ಫೈಝಿ ಮೂಸೋಡಿ ಉದ್ಘಾಟಿಸಿದರು.

ಜಲಪಾನದಲ್ಲಿ ಬೇಕಾದ ಪ್ರವಾದಿ ಚರ್ಯೆಯನ್ನು ಒಳಗೊಂಡ ಸ್ಲೋಗನ್‌ಗಳು ಕುಡಿಯುವ ನೀರಿನ ಪದ್ಧತಿಯನ್ನು ಆಕರ್ಷಿಸಿದವು. ಶರಫುಲ್ ಇಸ್ಲಾಂ ಕಮಿಟಿಯ ಅಧ್ಯಕ್ಷ ಟಿ.ಪಿ.ಕುಞಬ್ದುಲ್ಲ ಹಾಜಿ, ಕಾರ್ಯದರ್ಶಿ ತ್ವಯ್ಯಿಬ್ ಸದಸ್ಯರಾದ ಟಿ.ಪಿ.ಅಬ್ದುಲ್ ರಹಿಮಾನ್ ಹಾಕಿ, ಮುಹಮ್ಮದ್, ಕುಞಬ್ದುಲ್ಲ ಹಾಗೂ ಅಧ್ಯಾಪಕರಾದ ಶಾಹುಲ್ ಹಮೀದ್ ಫೈಝಿ ಕೋಝಿಕ್ಕೋಡ್ , ಗೌಸ್ ಮುಹ್ಯದ್ದೀನ್ ಮುಸ್ಲಿಯಾರ್ ಚಾರ್ಮಾಡಿ, ಅಬ್ದುಲ್ ರಹಿಮಾನ್ ಅರ್ಶದಿ ಆತೂರು, ಅಬ್ದುಲ್ಲ ಮೌಲವಿ ಮಲಪ್ಪುರಂ ಹಾಗೂ ವಿದ್ಯಾರ್ಥಿಗಳಾದ ಅನಸ್, ಫವಾಝ್, ಸಹದುಲ್ ಇರ್ಫಾನ್, ಸೈಫುಲ್ ಯಾಝಲ್, ಆಸಿಫ್ ಶಹೀರ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News