ಮೂಡುಬಿದಿರೆ : ಕಾರ್ಕಳ ಅಂಚೆ ಕಛೇರಿಯ ಪಾರ್ಸೆಲ್ ರಸ್ತೆ ಬದಿ ಪತ್ತೆ

Update: 2016-03-28 15:30 GMT

ಮೂಡುಬಿದಿರೆ: ಕಾರ್ಕಳ ಅಂಚೆ ಕಛೇರಿಯಿಂದ ಮೂಡುಬಿದಿರೆ ಅಂಚೆ ಕಛೇರಿಗೆ ಖಾಸಗಿ ಬಸ್ಸಿನಲ್ಲಿ ಕಳಿಹಿಸಿದ ಪಾರ್ಸೆಲೊಂದು ಜೈನ್‌ಪೇಟೆ ಬಳಿ0ು ರಸ್ತೆ ಬದಿ0ುಲ್ಲಿ ಸೋಮವಾರ ಸಂಜೆ ಪತ್ತೆಯಾಗಿದ್ದು ಅದನ್ನು ಸಾರ್ವಜನಿಕರು ಮೂಡುಬಿದಿರೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಚಿನ್ನದ ವ್ಯಾಪಾರಿ ಹರಿಪ್ರಸಾದ್ ಎಂಬವರು ಸೋಮವಾರ ಸಂಜೆ ಬೈಕ್‌ನಲ್ಲಿ ಜೈನ್‌ಪೇಟೆ ಮಾರ್ಗವಾಗಿ ಮೂಡುಬಿದಿರೆಗೆ ಬರುತ್ತಿದ್ದಾಗ ರಸ್ತೆಬದಿ0ುಲ್ಲಿ ಪಾರ್ಸೆಲ್ ಬಿದ್ದಿರುವುದನ್ನು ಗಮನಿಸಿದರು. ವಿಷ0ುವನ್ನು ಮಾಧ್ಯಮದವರ ಮೂಲಕ ಪೊಲೀಸರಿಗೆ ತಿಳಿಸಿ ನಂತರ ತನ್ನ ಸ್ನೇಹಿತ ಸೂರಜ್ ಬನ್ನಡ್ಕ ಅವರ ಜತೆ ಪಾರ್ಸೆಲನ್ನು ಪೊಲೀಸ್ ಠಾಣೆಗೆ ಹಸ್ತಾಂತರಿಸಿದರು.

 
ಕಾರ್ಕಳ ಅಂಚೆ ಕಛೇರಿ0ು ಮೊಹರಿದ್ದ ಪಾರ್ಸೆಲ್‌ನಲ್ಲಿ ಸೋಮವಾರದ ದಿನಾಂಕ ಮತ್ತು ಸಿಬಿಕೆ 5000311594 ರಿಜಿಸ್ತಾರ್ ಸಂಖ್ಯೆ ಇದೆ. ಒಂದು ಪಾರ್ಸೆಲ್‌ನಲ್ಲಿ ಚಿಕ್ಕಮಗಳೂರು ಎಲ್ಲೈಸಿ ಕಛೇರಿ0ು ವಿಳಾಸ ಹಾಗೂ ಇನ್ನೊಂದು ಪಾರ್ಸೆಲ್‌ನಲ್ಲಿ ದೆಹಲಿ0ು ಕಂಪೆನೊ0ೊಂದರ ವಿಳಾಸವಿದೆ. ಕಾರ್ಕಳ ಅಂಚೆಕಛೇರಿ0ುಲ್ಲಿ ಮೊಹರಾದ ಈ ಪಾರ್ಸೆಲನ್ನು ಕಾರ್ಕಳದಿಂದ ಮೂಡುಬಿದಿರೆ ಮಾರ್ಗವಾಗಿ ಮಂಗಳೂರಿಗೆ ತೆರಳುವ ಅಧಿಕೃತ ಅಂಚೆಮೇಲ್ ಖಾಸಗಿ ಬಸ್ಸಿನಲ್ಲಿ ಹಾಕಲಾಗಿತ್ತೆನ್ನಲಾಗಿದ್ದು ಬಸ್ಸಿನವರ ನಿರ್ಲಕ್ಷ್ಯದಿಂದ ರಸ್ತೆಗೆ ಬಿದ್ದಿರಬೇಕೆಂದು ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News