ಆರೋಗ್ಯ ವಿಮಾ ಯೋಜನೆ ಜಾರಿ

Update: 2016-03-28 18:09 GMT

ಬೆಳ್ತಂಗಡಿ, ಮಾ.28: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಂಘಟಿಸಲ್ಪಟ್ಟ ಸ್ವ-ಸಹಾಯ ಸಂಘದ ಸದಸ್ಯರ ಆರೋಗ್ಯ ವಿಮೆ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.
ಒಂದು ವರ್ಷ ವಯಸ್ಸಿನಿಂದ 79 ವರ್ಷದವರೆಗಿನ ವಯಸ್ಸಿನವರು ಆರೋಗ್ಯ ವಿಮೆಗೆ ಒಳಪಡುವರು. ಸದ್ಯ 11 ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಯಲ್ಲಿದೆ.
ವಿವಿಧ ತಾಲೂಕುಗಳ ಸದಸ್ಯರ ವಿವರ ಮತ್ತು ಮಾಹಿತಿ ಪುಸ್ತಕ ವಿತರಣಾ ಕಾರ್ಯಕ್ರಮ ಪ್ರಾರಂಭವಾಗಿದ್ದು, ಶ್ರೀಕ್ಷೇತ್ರ ಧರ್ಮಸ್ಥಳದ ಕಚೇರಿ ಸಿಬ್ಬಂದಿ ವ್ಯವಸ್ಥಿತವಾಗಿ ತಾಲೂಕುಗಳಿಗೆ ವಿತರಣೆ ಮಾಡುತ್ತಿದ್ದಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷ ಡಾ.ಡಿ.ವೀರೇಂದ್ರ ಹೆಗ್ಗಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News