ಮಹಿಳೆಯರ ಆರೋಗ್ಯ ಮಾಹಿತಿ ಕಾರ್ಯಾಗಾರ

Update: 2016-03-28 18:13 GMT

ಮಣಿಪಾಲ, ಮಾ.28: ರಾಜಾಪುರ ಸಾರಸ್ವತ ಬ್ರಾಹ್ಮಣ ಮಹಿಳಾ ವೇದಿಕೆ ಮಣಿಪಾಲ ಇದರ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾ ಚರಣೆಯ ಅಂಗವಾಗಿ ಮಹಿ ಳೆಯರಿಗಾಗಿ ಆರೋಗ್ಯ ಮಾಹಿತಿ ಕಾರ್ಯಾಗಾರವನ್ನು ಮಣಿಪಾಲ ಆರ್‌ಎಸ್‌ಬಿ ಸಭಾಭವನದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ತಾಪಂ ಸದಸ್ಯೆ ಬಂಟಕಲ್ಲು ಗೀತಾ ವಾಗ್ಲೆ, ಇಂದು ಸುಶಿಕ್ಷಿತ ಪ್ರಜ್ಞಾವಂತ ಮಹಿಳೆಯರಿಗೆ ಸಮಾಜದಲ್ಲಿ ನೂರಾರು ಅವಕಾಶಗಳಿದ್ದು, ಜವಾಬ್ದಾರಿಯುತ ಮಹಿಳೆಯರಿಂದ ಸಮಾಜದಲ್ಲಿ ಪರಿವ ರ್ತನೆ ಸಾಧ್ಯ ಎಂದರು.
ಅಧ್ಯಕ್ಷತೆಯನ್ನು ಮಹಿಳಾ ವೇದಿಕೆಯ ಅಧ್ಯಕ್ಷೆ ಸುಮಿತ್ರಾ ಎಚ್. ನಾಯಕ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ತಾಪಂ ಸದಸ್ಯೆ ಸಂಧ್ಯಾ ಕಾಮತ್ ಮಾತ ನಾಡಿದರು. ಈ ಸಂದರ್ಭ ಉಡುಪಿ ತಾಪಂಗೆ ಆಯ್ಕೆಯಾದ ನೂತನ ಸದಸ್ಯರನ್ನು ಅಭಿನಂದಿಸಲಾಯಿತು.

ವೇದಿಕೆಯ ಸ್ಥಾಪಕ ಅಧ್ಯಕ್ಷೆ ಸುನೀತಾ ಎನ್. ನಾಯಕ್ ಉಪ ಸ್ಥಿತರಿದ್ದರು. ಸುಮತಿ ಕಾಮತ್ ವಂದಿಸಿದರು. ವಿದ್ಯಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ನಂತರ ಜರಗಿದ ಆರೋಗ್ಯ ಮಾಹಿತಿ ಕಾರ್ಯಾಗಾರದಲ್ಲಿ ಹೀರೇಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿಜಯಲಕ್ಷ್ಮೀ ನಾಯಕ್, ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್‌ನ ಭಾರತಿ ನಾಯಕ್, ಪ್ರತಿಭಾ ಕಾಮತ್ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News