ಕೊಣಾಜೆ : ಉತ್ತಮ ಭವಿಷ್ಯಕ್ಕೆ ಪರಿಶ್ರಮದ ಹೆಜ್ಜೆ ಅಗತ್ಯ: ಡಾ.ಪಿ.ಎ.ಇಬ್ರಾಹಿಂ ಹಾಜಿ

Update: 2016-03-29 11:19 GMT

ಪಿ.ಎ.ಶಿಕ್ಷಣ ಸಂಸ್ಥೆಯ ಪಿ.ಎ.ಪಾಲಿಟೆಕ್ನಿಕ್ ಕಾಲೇಜಿನ ದಶವಾರ್ಷಿಕೋತ್ಸವದ ಅಂಗವಾಗಿ ಮಂಗಳವಾರ ನಡೆದ ಸಮಾರಂಭದಲ್ಲಿ ಪಿ.ಎ.ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಪಿ.ಎ.ಇಬ್ರಾಹಿಂ ಹಾಜಿ ಮಾತನಾಡಿದರು. ಪಿ.ಎ. ಪಾಲಿಟೆಕ್ನಿಕ್ ಕಾಲೇಜಿನಲ್ಲಿ ‘ಆಕೃತಿ-2016’ ದಶವಾರ್ಷಿಕ ಸಮಾರಂಭ
 ಕೊಣಾಜೆ: ಕೇವಲ ಆಕಾಂಕ್ಷೆಗಳು ನಮ್ಮಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ, ನಾವು ಮಾಡುವ ಪ್ರತಿಯೊಂದು ಕಾರ್ಯಚಟುವಟಿಕೆಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು, ನಿರ್ಣಯಗಳು ನಮ್ಮ ಭವಿಷ್ಯದ ಬದಲಾವಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಜನೆಯ ಸಮಯದಲ್ಲೇ ಓದಿನೊಂದಿಗೆ ಉತ್ತಮ ಯಶಸ್ವಿ ಭವಿಷ್ಯದ ಗುರಿಯೊಂದಿಗೆ ಯಶಸ್ಸಿನ ಹೆಜ್ಜೆಗಳನ್ನಿಡಬೇಕು ಎಂದು ಪಿ.ಎ.ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಪಿ.ಎ.ಇಬ್ರಾಹಿಂ ಹಾಜಿ ಅವರು ಹೇಳಿದರು.
  ಪಿ.ಎ.ಶಿಕ್ಷಣ ಸಂಸ್ಥೆಯ ಪಿ.ಎ.ಪಾಲಿಟೆಕ್ನಿಕ್ ಕಾಲೇಜಿನ ದಶವಾರ್ಷಿಕೋತ್ಸವದ ಅಂಗವಾಗಿ ಮಂಗಳವಾರ ಕಾಲೇಜು ಸಭಾಂಗಣದಲ್ಲಿ ನಡೆದ ‘ಆಕೃತಿ-16’ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ನಮ್ಮ ಜೀವನದಲ್ಲಿ ಎದುರಾಗುವ ಯಾವುದೇ ಸವಾಲುಗಳಿಗೆ ನಾವು ಶರಣಾಗದೆ ಪರಿಶ್ರಮ ಹಾಗೂ ಸಾಧನೆಯ ಮೂಲಕ ಯಶಸ್ಸನ್ನು ಕಂಡುಕೊಳ್ಳಬೇಕು. ಕೋಪ ಯಕೃತ್ತನ್ನು , ದು:ಖ ಶ್ವಾಸಕೋಶವನ್ನು, ಚಿಂತೆ ಹೊಟ್ಟೆಯನ್ನು, ಒತ್ತಡಗಳು ಹೃದಯ ಮತ್ತು ಮನಸ್ಸನ್ನು ಮತ್ತು ಭಯ ಮೂತ್ರಪಿಂಡವನ್ನು ದುರ್ಬಲಗೊಳಿಸುತ್ತದೆ. ಸೋಲುಗಳನ್ನು ಎದುರಿಸಿ ಯಶಸ್ಸಿನಿಂದ ಖುಷಿಪಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಪಿ.ಎ.ಶಿಕ್ಷಣ ಸಂಸ್ಥೆಯ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು ಕಳೆದ ಹಲವು ವರ್ಷದಿಂದ ಉತ್ತಮ ಸಾಧನೆಯೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆಗೈಯತ್ತಿರುವುದು ಹೆಮ್ಮೆಯ ವಿಚಾರ. ಮುಂದಿನ ದಿನಗಳಲ್ಲಿ ಉತ್ತಮ ಸಾಧನೆಯೊಂದಿಗೆ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹೊರಹೊಮ್ಮಲಿ ಎಂದು ಶುಭಹಾರೈಸಿದರು.
 
  
 ಸಮಾರಂಭದಲ್ಲಿ ಪಿ.ಎ.ಶಿಕ್ಷಣ ಸಂಸ್ಥೆಯ ಕಾರ್ಯಾಡಳಿತ ನಿರ್ದೇಶಕರಾದ ಪಿ.ಎ.ಅಬ್ದುಲ್ ಇಬ್ರಾಹಿಂ, ಆಡಳಿತಾಧಿಕಾರಿ ಕೆ.ಎಂ.ಹನೀಫ್, ಪಿ.ಎ.ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಅಬ್ದುಲ್ ಶರೀಫ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಪಿ.ಎ.ಇಂಜಿನಿಯರಿಂಗ್ ಕಾಲೇಜಿನ ಉಪಪ್ರಾಂಶುಪಾಲ ಡಾ.ರಮೀರ್, ಡಾ.ಎ.ಜೆ.ಆಂಥೋನಿ, ಎಂ.ಬಿ.ಎ.ವಿಭಾಗದ ಮುಖ್ಯಸ್ಥರಾದ ಬಿರಾನ್ ಮೊಯ್ದಿನ್, ಜನರಲ್ ಮ್ಯಾನೇಜರ್ ಸರ್ಫುದ್ದೀನ್, ಪಿ.ಎ.ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಪಿ.ಸೂಫಿ ಮುಂತಾದವರು ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲ ಪ್ರೊ.ಇಸ್ಮಾಯಿಲ್ ಖಾನ್ ಸ್ವಾಗತಿಸಿದರು. ಎಲೆಕ್ಟ್ರಾನಿಕ್ಸ್ ಆಂಡ್ ಇಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥ ಅಜಿತ್ ಕುಮಾರ್ ವಾಸು ಕಾರ್ಯಕ್ರಮ ನಿರ್ವಹಿಸಿದರು. ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥೆ ದಿವ್ಯಾ.ಎ ವಂದಿಸಿದರು. ಈ ಸಂದರ್ಭ ಪಾಲಿಟೆಕ್ನಿಕ್ ನ ಅಕಾಡೆಮಿಕ್ಸ್ ಜರ್ನಲ್ ಫೇಸ್‌ಗ್ರೂಪ್ ನ್ನು ಬಿಡುಗಡೆಗೊಳಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News