ಮೂಡುಬಿದಿರೆ : ಸ್ವಚ್ಛ ಗ್ರಾಮ-ಸ್ವಚ್ಛ ತೋಡಾರು ಅಭಿಯಾನ

Update: 2016-03-29 13:00 GMT
ಸ್ವಚ್ಛ ಗ್ರಾಮ-ಸ್ವಚ್ಛ ತೋಡಾರು ಅಭಿಯಾನ ಕಾರ್ಯಕ್ರಮ ನಡೆಯಿತು

ಮೂಡುಬಿದಿರೆ: ಸ್ವಚ್ಛ ಭಾರತ ಮಿಷನ್-ಸ್ವಚ್ಛ ತೋಡಾರು ಅಭಿಯಾನದಡಿಯಲ್ಲಿ ತೋಡಾರಿನ ತುಡರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇರುವೈಲು ಗ್ರಾಮ ಪಂಚಾಯತ್, ಯುವಶಕ್ತಿ ಯುವಮಂಡಲ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಸ್ವಚ್ಛ ಗ್ರಾಮ-ಸ್ವಚ್ಛ ತೋಡಾರು ಕಾರ್ಯಕ್ರಮ ನಡೆಯಿತು.  ತೋಡಾರು ಗ್ರಾಮದ ಒಂದನೇ ವಾರ್ಡ್‌ನ ಹೆಚ್ಚಿನ ಸ್ಥಳಗಳನ್ನು ಶುಚಿಗೊಳಿಸುವ ಹಾಗೂ ಜಾಗೃತಿ ಮೂಡಿಸುವ ಕೆಲಸ ‘ಆರೋಗ್ಯಕರ ಜೀವನದೆಡೆಗೆ-ನಮ್ಮದೊಂದು ನಡೆ’ ಎಂಬ ಧ್ಯೇಯವಾಕ್ಯದೊಂದಿಗೆ ಹಮ್ಮಿಕೊಳ್ಳಲಾಯಿತು. ಟ್ರಸ್ಟ್‌ನ ಪದಾಧಿಕಾರಿಗಳ ಜೊತೆಗೆ ಸುಮಾರು 80ರಷ್ಟು ಗ್ರಾಮಸ್ಥರು ಕೈಜೋಡಿಸಿದರು. ಕೇವಲ ಶುಚಿತ್ವ ಮಾತ್ರವಲ್ಲದೇ ಗ್ರಾಮದ ಮೂರು ಬಸ್ ನಿಲ್ದಾಣ, ಸಾರ್ವಜನಿಕ ತೆರೆದ ಬಾವಿಗೆ ಕಾಯಕಲ್ಪ ನೀಡಲಾಯಿತು. ಜಿಲ್ಲಾ ಪಂಚಾಯತ್ ಸದಸ್ಯ ಸುಚರಿತ ಶೆಟ್ಟಿ ಸ್ವಚ್ಛತಾ ಆಂದೋಲನ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿ, ಗ್ರಾಮದ ಸ್ವಚ್ಛತೆ ದೇಶ ಅನಿವಾರ್ಯತೆ. ಇದು ನಿರಂತರವಾಗಿ ನಡೆಯಬೇಕೆನ್ನುವುದು ಪ್ರದಾನಿ ಮೋದಿ ಅವರ ಮಹದಾಸೆ. ಆರೋಗ್ಯ ಸಂಬಂಧಿಸಿದ ಕಾರ್ಯಕ್ರನಮಗಳ ಜೊತೆಗೆ ನೈರ್ಮಲ್ಯದ ಕುರಿತು ಕೂಡ ಜನಜಾಗೃತಿ ಮಾಡುತ್ತಿರುವ ತುಡರ್ ಚಾರಿಟೇಬಲ್ ಟ್ರಸ್ಟ್ ಸಮಾಜಸೇವೆ ಅಭಿನಂದನಾರ್ಹ ಎಂದರು.

ವಕೀಲ ಶಾಂತಿ ಪ್ರಸಾದ್ ಹೆಗ್ಡೆ ಮಾತನಾಡಿ, ಮನೆಮನೆ ಬೆಳಗಳಿ, ಗ್ರಾಮ ಬೆಳಗಲಿ ಎಂಬ ಧ್ಯೇಯೋದ್ಧೇಶವನ್ನಿರಿಸಿಕೊಂಡು ಪ್ರಾರಂಭವಾದ ತುಡರ್ ಚಾರಿಟೇಬಲ್ ಟ್ರಸ್ಟ್, ಈಗ 1 ನೇ ವಾರ್ಡ್‌ನಲ್ಲಿ ಸ್ವಚ್ಛತಾ ಆಂದೋಲನ ಹಮ್ಮಿಕೊಂಡಿದೆ, ಮುಂದೆ ಇದು ಸಂಪೂರ್ಣ ಗ್ರಾಮದ ಅಭಿವೃದ್ಧಿಯಲ್ಲಿ ಗ್ರಾಮಸ್ಥರು ಹಾಗೂ ಪಮಚಾಯಿತಿ ಜೊತೆ ಕೈಜೋಡಿಸಲಿದೆ ಎಂದರು. ಟ್ರಸ್ಟಿ ಲೋಹಿತ್ ಶೆಟ್ಟಿ ಟ್ರಸ್ಟ್‌ನ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಟ್ರಸ್ಟ್‌ನ ಅಧ್ಯಕ್ಷ ಸುನೀಲ್ ಶೆಟ್ಟಿ, ಸ್ಥಾಪಕಾಧ್ಯಕ್ಷ ಮಿಥುನ್ ಬಿ.ಶೆಟ್ಟಿ, ಕಾರ್ಯದರ್ಶಿ ಲೋಕೇಶ್ ಶೆಟ್ಟಿ, ಕೋಶಾಧಿಕಾರಿ ಜೀವಿತ್ ಶೆಟ್ಟಿ, ಉಪಾಧ್ಯಕ್ಷೆ ಮನೋಜ್ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News