ಮೂಡುಬಿದಿರೆ : ಪುರಸಭೆ ಸೂಚಿಸಿದ ಸ್ಥಳಗಳಲ್ಲಿ ಗೂಡಂಗಡಿಗಳ ವ್ಯಾಪಾರ : ಪುರಸಭಾಧಿವೇಶನದಲ್ಲಿ ತೀರ್ಮಾನ

Update: 2016-03-29 13:26 GMT

ಮೂಡುಬಿದಿರೆ: ಪುರಸಭೆಯು ಇತ್ತೀಚೆಗೆ ತೆರವುಗೊಳಿಸಿರುವ ಅನಧಿಕೃತ ಗೂಡಂಗಡಿಗಳಿಗೆ ತಲಾ ರೂ 500 ದಂಡವಿಧಿಸಿ ವಾರೀಸುದಾರರಿಗೆ ಬಿಟ್ಟುಕೊಡುವುದು ಹಾಗೂ ಈ ಗೂಡಂಗಡಿಗಳು ಮುಂದೆ ಪುರಸಭೆ ಸೂಚಿಸಿದ ಸ್ಥಳದಲ್ಲಿ ಮಾತ್ರ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಪುರಸಭೆಯು ತೀರ್ಮಾನಿಸಿದೆ.  ಪುರಸಭಾ ಅಧ್ಯಕ್ಷೆ ರೂಪಾ ಎಸ್. ಶೆಟ್ಟಿ ಅಧ್ಯಕ್ಷತೆ0ುಲ್ಲಿ ಪುರಸಭಾ ಸಭಾಭವನದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. ಸದಸ್ಯ ಪಿ.ಕೆ ಥೋಮಸ್ ಮಾತನಾಡಿ ಗೂಡಂಗಡಿಗಳ ಹೆಸರಿನಲ್ಲಿ ಒಳಬಾಡಿಗೆ ವ್ಯವಹಾರ ನಡೆ0ುುತ್ತಿದೆ. ಗೂಡಂಗಡಿ ಹೊಂದಿದವರೆ ಅಲ್ಲಿ ವ್ಯಾಪಾರ ಮಾಡುತ್ತಿದ್ದವರು ಕಡಿಮೆ. ಒಬ್ಬೊಬ್ಬ ಮೂರ್ನಾಲ್ಕು ಗೂಡಂಗಡಿ0ುನ್ನು ಹೊಂದಿ ದಿನಕ್ಕೆ ತಲಾ ರೂ 300ರಂತೆ ಒಳಬಾಡಿಗೆ ಪಡೆ0ುುತ್ತಾರೆ. ಇದೇ ರೀತಿ ನಾನು ಬ್ಯಾಂಕ್ ಸಾಲ ಪಡೆದು ಮೂರು ಗೂಡಂಗಡಿ ಹಾಕಲು ಪುರಸಭೆ ಅನುಮತಿ ಕೊಡುತ್ತದೆ0ೆು ಎಂದು ಪ್ರಶ್ನಿಸಿದ ಅವರು ಸ್ವಂತ ವ್ಯಾಪಾರಿಗಳಿಗೆ ತೊಂದರೆ ಆಗುವುದು ಬೇಡ. ಈಗ ವಶಪಡಿಸಿಕೊಂಡ ಅನಧಿಕೃತ ಗೂಡಂಗಡಿಗಳಿಗೆ ತಲಾ ರೂ 500 ದಂಡ ವಿಧಿಸಿ ವಾರೀಸುದಾರರಿಗೆ ಬಿಟ್ಟುಕೊಡಿ. ಮುಂದೆ ಪುರಸಭೆ ಸೂಚಿಸಿದ ಸ್ಥಳದಲ್ಲೆ ಅವರು ವ್ಯಾಪಾರ ಮಾಡಲಿ. ಈ ಬಗ್ಗೆ ಪುರಸಭೆ ಸಮಿತಿ ರಚಿಸಿ ಕ್ರಮ ಕೈಗೊಳ್ಳಲಿ ಎಂದು ಸಲಹೆಯಿತ್ತರು.  ಈಗಾಗಲೇ ವ್ಯಾಪಾರವಿಲ್ಲದೆ ತೊಂದರೆ ಆಗಿರುವುದರಿಂದ ದಂಡ ವಿಧಿಸುವುದು ಬೇಡ ಎಂದು ರಮಣಿ ಮತ್ತು ಅಲ್ವಿನ್ ಮೆನೇಜಸ್ ಹೇಳಿದರು. ದಂಡ ವಿಧಿಸುವುದಕ್ಕೆ ಹೆಚ್ಚಿನ ಸದಸ್ಯರು ಒಪ್ಪಿಗೆ ಸೂಚಿಸಿದರಲ್ಲದೆ ಸ್ವಂತ ವ್ಯಾಪಾರ ಮಾಡುವವರಿಗೆ ಮಾತ್ರ ಗೂಡಂಗಡಿ ಇಡಲು ಅವಕಾಶ ನೀಡುವಂತೆ ಸಲಹೆ ನೀಡಿದಾಗ ಮುಖ್ಯಾಧಿಕಾರಿ ಶೀನ ನಾಯ್ಕಾ ಮಾತನಾಡಿ ಗೂಡಂಗಡಿಗಳ ಬಗ್ಗೆ ಹಿಂದಿನ ಸಭೆ0ುಲ್ಲಿ ತೆಗೆದುಕೊಂಡ ನಡವಳಿ0ುನ್ನು ಸಭೆಗೆ ತಿಳಿಸಿ ಪುರಸಭೆಯು ಸೂಚಿಸಿದ ಸ್ಥಳದಲ್ಲಿಯೇ ಗೂಡಂಗಡಿಗಳು ವ್ಯಾಪಾರ ಮಾಡುವಂತೆ ನಿರ್ಣಯಿಸಲಾಯಿತು.  ಮಹಾ0ೋಜನೆ ಅನುಷ್ಠಾನವಾಗದಿದ್ದುರಿಂದ ಅಲ್ಲಿ0ುವರೆಗೆ ಕಟ್ಟಡಗಳಿಗೆ ಪುರಸಭೆ0ೆು ಲೈಸನ್ಸ್ ನೀಡಬೇಕು, ಮೂಡಾದಿಂದ ತಾಂತ್ರಿಕ ಸಲಹೆ ಪಡೆ0ುುವುದು ಬೇಡ ಎಂದು ವಕೀಲ ಬಾಹುಬಲಿ ಪ್ರಸಾದ್ ಹೇಳಿದರು. ಇದಕ್ಕೆ ಹನೀಪ್ ಅಲಂಗಾರ್ ರತ್ನಾಕರ ದೇವಾಡಿಗ ಹಾಗೂ ಪಿ.ಕೆ ಥೋಮಸ್ ದನಿಗೂಡಿಸಿದರು. ಈ ಬಗ್ಗೆ ಮೂಡಾ ಅಧ್ಯಕ್ಷರು ಪುರಸಭೆಗೆ ಒಪ್ಪಿಗೆ ಪತ್ರ ಕೊಟ್ಟರೆ ಅದನ್ನು ಸರಕಾರಕ್ಕೆ ಕಳಿಹಿಸಿಕೊಟ್ಟು ಅನುಮತಿ ಪಡೆ0ೋಣ ಎಂದು ಸದಸ್ಯರು ಹೇಳಿದಾಗ ಅದಕ್ಕೆ ಆಕ್ಷೇಪಿಸಿದ ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್ ’ಪುರಸಭೆ0ೆು ಸರಕಾರ’ ಇಲ್ಲೆ ನಿರ್ಧಾರ ತೆಗೆದುಕೊಳ್ಳೋಣ ಎಂದರು. ಆದರೆ ಸರಕಾರದ ಸುತ್ತೋಲೆ0ುನ್ನು ಉಲ್ಲಂಘಿಸಸಲು ಮುಖ್ಯಾಧಿಕಾರಿ ನಿರಾಕರಿಸಿದರು.   ಕ್ರಿ0ಾ 0ೋಜನೆ0ುಲ್ಲಿ ಕಲ್ಲಬೆಟ್ಟು ವಾರ್ಡ್‌ಗೆ ಅನುದಾನ ಕಾದಿರಿಸಿಲ್ಲ. ಈ ಭಾಗದ ಜನರನ್ನು ಪುರಸಭೆಯು ದ್ವಿತೀ0ು ದರ್ಜೆ ನಾಗರಿಕರಂತೆ ಕಾಣುತ್ತಿದೆ. ಮೂಲಭೂತ ಸೌಕ0ರ್ುಗಳ ಕೊರತೆ ಬಗ್ಗೆ ಮನವಿ ನೀಡಿದರೂ ಸ್ಪಂದಿಸಿಲ್ಲ ಎಂದು ನಾಮನಿರ್ದೇಶನ ಸದಸ್ಯ ಅಲ್ವಿನ್ ಮೆನೇಜಸ್ ಆರೋಪಿಸಿ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು. ಇದಲ್ಲದೆ ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರನಿಗೆ ಬಿಲ್ ಪಾವತಿಸದಂತೆ ಆಕ್ಷೇಪ ಪತ್ರ ನೀಡಿದರೂ ಅಧಿಕಾರಿಗಳು ಕಮಿಷನ್ ಆಸೆಗೆ ಬಿಲ್ ಪಾವತಿಸಿದ್ದೀರಿ ಎಂಬ ಆರೋಪ ಅಧಿಕಾರಿಗಳ ಅಸಮಧಾನಕ್ಕೆ ಕಾರಣವಾಯಿತು. ಕೊನೆಗೆ ಕ್ರಿ0ಾ 0ೋಜನೆ0ುನ್ನು ಪರಷ್ಕರಿಸಲು ಪುರಸಭೆ ಅಧಿಕಾರಿಗಳು ನಿರ್ಧರಿಸಿದರು. ಮಾರುಕಟ್ಟೆ ಸ್ಥಳಾಂತರವಾಗಲಿರುವುದರಿಂದ ಮೀನುಮಾರುಕಟ್ಟೆ0ುಲ್ಲಿ ಅಭಿವೃದ್ಧಿ ಕಾ0ರ್ುಗಳನ್ನು ನಡೆಸುವುದಕ್ಕೆ ಉಮೇಶ್ ದೇವಾಡಿಗ ಮತ್ತು ಮನೋಜ್ ಶೆಟ್ಟಿ ಆಕ್ಷೇಪ ಎತ್ತಿದರು. ಹಾಸುಕಲ್ಲು ಹಾಕಿ ಸಣ್ಣಪುಟ್ಟ ದುರಸ್ತಿ ಮಾತ್ರ ಎಂದು ಅಧ್ಯಕ್ಷರು ಉತ್ತರಿಸಿದರು.

 ಉಪಾಧ್ಯಕ್ಷೆ ಶಕುಂತಲಾ ದೇವಾಡಿಗ, ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಸದಸ್ಯರುಗಳಾದ ರತ್ನಾಕರ ದೇವಾಡಿಗ, ಪ್ರಸಾದ್, ಇಂಜಿನಿಯರ್ ದಿನೇಶ್, ಪರಿಸರ ಅಭಿಯಂತರೆ ಶಿಲ್ಪಾ, ಹಿರಿಯ ಆರೋಗ್ಯ ನಿರೀಕ್ಷಕಿ, ಹಿರಿಯ ಕಂದಾಯ ಅಧಿಕಾರಿ ಧನಂಜಯ ಸಭೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News