ಮುಲ್ಕಿ : ಬಪ್ಪನಾಡು ದುರ್ಗೆಗೆ 60 ಸಾವಿರ ಚೆಂಡು ಮಲ್ಲಿಗೆ ಹೊ ಅರ್ಪಣೆ

Update: 2016-03-29 16:22 GMT

 ಮುಲ್ಕಿ;ಪುರಾಣ ಪ್ರಸಿದ್ದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಶಯನೋತ್ಸವ ನಡೆಯಿತು, ಶ್ರೀ ದುರ್ಗೆಗೆ ಭಕ್ತರಿಂದ ಸುಮಾರು 60000 ಚೆಂಡು ಮಲ್ಲಿಗೆ ಸಮರ್ಪಣೆಯಾಗಿದೆ ಬಪ್ಪನಾಡು ದೇವಳದಲ್ಲಿ ಹಗಲು ರಥೋತ್ಸವದ ರಾತ್ರಿ ಶಯನೋತ್ಸವ ನಡೆಯುತ್ತದೆ ಇಲ್ಲಿ ಶಯನೋತ್ಸವ ವಿಶೇಷ ಮಹತ್ವವನ್ನು ಪಡೆದಿದೆ ಶಯನೋತ್ಸವ ದುರ್ಗೆಯ ಸನ್ನಿಧಿಯಲ್ಲಿ ನಡೆಯುವ ವಿಶೇಷ ಕ್ರಿಯೆ. ಹಿಂದಿನ ಕಾಲದಿಂದಲೂ ಶಯನದ ಹೂ ಬಹಳ ಪ್ರಮುಖ್ಯವನ್ನು ಪಡೆದಿದೆ. ಭಕ್ತರು ಶಯನೋತ್ಸವದ ದಿನ ಮದ್ಯಾಹ್ನದಿಂದಲ್ಲೇ ಮಲ್ಲಿಗೆ ಹೂವನ್ನು ದೇವಸ್ಥಾನಕ್ಕೆ ಅರ್ಪಿಸಲು ಆಗಮಿಸುತ್ತಾರೆ, ಭಕ್ತರಿಂದ ಅರ್ಪಣೆಯಾದ ಮಲ್ಲಿಗೆಯನ್ನು ದೇವಸ್ಥಾನದ ಪೌಳಿಯಲ್ಲಿ ಬಹಳ ಚಂದವಾಗಿ ಜೋಡಿಸುತ್ತಾರೆ. ನಂತರ ರಾತ್ರಿ ಎಲ್ಲಾ ಮಲ್ಲಿಗೆಯನ್ನು ಗರ್ಭಗುಡಿಯ ಒಳಗೆ ಜೋಡಿಸುತ್ತಾರೆ. ಇದರಿಂದ ದುರ್ಗೆಯು ತೃಪ್ತಿಯಾಗಿ ಭಕ್ತರು ಯಾವ ಉದ್ದೇಶದಿಂದ ಮಲ್ಲಿಗೆ ಸಲ್ಲಿಸುತ್ತಾರೋ ಆ ಉದ್ದೇಶವನ್ನು ದುರ್ಗೆ ಈಡೇರಿಸುತ್ತಾಳೆ ಎಂಬುದು ಜನರ ನಂಬಿಕೆ. ದೂರ ದೂರದ ಊರಿನವರು ಬಂದು ಆ ದಿನ ಮಲ್ಲಿಗೆಯನ್ನು ಅರ್ಪಿಸುದು ಇಲ್ಲಿನ ವಿಶೇಷ. ಶಯನೋತ್ಸವದ ಮರುದಿನ ಬೆಳಿಗ್ಗೆ 7.30ಕ್ಕೆ ಗಂಟೆಗೆ ದೇವಸ್ಥಾನದ ಬಾಗಿಲು ತೆರೆದು( ಕವಟೋದ್ಘಟನೆ) ದುರ್ಗೆಗೆ ಮಹಾಪೂಜೆಯಾದ ನಂತರ ಗರ್ಭಗುಡಿಯಲ್ಲಿದ್ದ ಮಲ್ಲಿಗೆಯನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ಹಂಚುವ ಕ್ರಮ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News