ಕಡಬ : ಅತ್ಯಾಚಾರ ಆರೋಪ: ಆರೋಪಿ ಪರಾರಿ

Update: 2016-03-29 16:23 GMT

ಕಡಬ, ಮಾ.29. ಠಾಣಾ ವ್ಯಾಪ್ತಿಯ ಕೊಣಾಜೆ ಎಂಬಲ್ಲಿ ಅಪ್ರಾಪ್ತ ಬಾಲಕಿಯೋರ್ವಳನ್ನು ಅತ್ಯಾಚಾರಕ್ಕೆ ಯತ್ನಿಸಿದ್ದಾಗಿ ಮರ್ಧಾಳದ ಆಟೊ ಚಾಲಕ ಉಮೇಶ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಉಮೇಶನು ತಲೆಮರೆಸಿಕೊಂಡಿರುವ ಘಟನೆ ಮಂಗಳವಾರದಂದು ನಡೆದಿದೆ. ವಿವಾಹಿತನಾಗಿರುವ ಉಮೇಶನ ವಿರುದ್ಧ ಬಾಲಕಿ ನೀಡಿರುವ ದೂರಿನನ್ವಯ ಕಡಬ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News